

ಕಾರ್ಕಳ, ಆ.24: ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಸುಮೋಟೊ ಪ್ರಕರಣ ದಾಖಲಿಸಿಕೊಂಡು, ಸೋಮವಾರ ಮುಂಜಾನೆ ಕಾರ್ಕಳ ಪುರಸಭೆ ಕಚೇರಿ 8 ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದರು.
ಮಂಗಳೂರು ಲೋಕಾಯುಕ್ತ ನಿರೀಕ್ಷಕ ಚಂದ್ರಶೇಖರ್ ನೇತೃತ್ವದ ಎಂಟು ಮಂದಿ ಅಧಿಕಾರಿಗಳ ತಂಡ ಪುರಸಭೆಗೆ ಆಗಮಿಸಿ ಅಧಿಕಾರಿಗಳು ಎಲ್ಲಾ ಸಿಬ್ಬಂದಿಗಳ ಮೊಬೈಲ್ ಪಡೆದು ತದನಂತರ ವಿವಿಧ ವಿಭಾಗಗಳಲ್ಲಿನ ವಿಲೇವಾರಿಯಾಗದ ಕಡತಗಳ ಮಾಹಿತಿ ಪಡೆದುಕೊಂಡರು. ಇದೇವೇಳೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಕಡತಗಳು, ಸಾರ್ವಜನಿಕರ ಅರ್ಜಿಗಳ ವಿಲೇವಾರಿ, ಅನುಮತಿ ಹಾಗೂ ಇತರ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.
ಕಾರ್ಕಳ ಪುರಸಭೆಯ ವಿವಿಧ ವಿಭಾಗಗಳ ಅಧಿಕಾರಿಗಳಿಂದ ಬಾಕಿ ಕಡತಗಳ ಸಂಖ್ಯೆ, ಅವುಗಳ ವಿಳಂಬಕ್ಕೆ ಕಾರಣ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಲೋಕಾಯುಕ್ತ ತಂಡ ಮಾಹಿತಿ ಪಡೆದುಕೊಂಡಿತು. ಕಡತ ವಿಲೇವಾರಿಯಲ್ಲಿ ಉಂಟಾಗುವ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡುವ ಅಗತ್ಯವಿದೆ ಎಂದು ಅಧಿಕಾರಿಗಳು ಸೂಚಿಸಿದರು.





.
.
.
.
.
.
.
.
.
.
.
.
.
.
.
.
.
.
.
.
