ಕಾರ್ಕಳ: ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಬೆಟ್ಟು ಮಾಳ ಇಲ್ಲಿನ ಪ್ರಾಥಮಿಕ ವಿಭಾಗದ ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆ,ಋತುಚಕ್ರ ಹಾಗೂ ಶುಚಿತ್ವ ಕುರಿತಾದ ಮಾಹಿತಿಯನ್ನು ತಲಪಾಡಿ ಶ್ರೀ ಶಾರದಾ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಶ್ವಿನಿ ಮರಾಠೆ ನೀಡಿದರು.
ಹದಿಹರೆಯ ವಯಸ್ಸಿನಲ್ಲಿ ದೇಹದಲ್ಲಿ ಆಗುವ ಬದಲಾವಣೆಗಳು,ಬೆಳವಣಿಗೆಗಳು,ಅದರ ಲಕ್ಷಣಗಳು,ಮತ್ತು ಋತುಚಕ್ರ ಸಮಯದಲ್ಲಿ ಕೈಗೊಳ್ಳಬೇಕಾದ ಸ್ವಚ್ಚತೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಸಚಿತ್ರವಾಗಿ ಮಾಹಿತಿ ನೀಡಿದರು.ಮಕ್ಕಳಿಗೆ ಉಂಟಾಗಬಹುದಾದ ತುಮುಲಗಳು,ಉದ್ವೇಗಗಳು,ಅದನ್ನು ನಿರ್ವಹಿಸಬೇಕಾದ ರೀತಿಯನ್ನೂ ವಿವರಿಸಿದರು.
ಮಕ್ಕಳ ಕೆಲವು ಗೊಂದಲಗಳು,ಸಮಸ್ಯೆಗಳು,ಅನುಮಾನಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರ ನೀಡಿದರು.
ಶಿಕ್ಷಕಿ ಹರಿಣಿ, ಮುಖ್ಯ ಶಿಕ್ಷಕಿ ಪ್ರಭಾವತಿ,ಪಾಲಕರು,ಬಾಲಕಿಯರುಹಾಜರಿದ್ದರು.ಶಿಕ್ಷಕಿ ನಳಿನಿ ತಾಂತ್ರಿಕ ಸಹಕಾರ ನೀಡಿದರು. ಮಿಥುನ್ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿಕೊಟ್ಟರು.