ಉಡುಪಿ : ನವಜಾತ ಶಿಶುವಿನ ಮೃತದೇಹವೊಂದು ಜಾಮೀಯಾ ಮಸೀದಿಗೆ ಸಂಬಂಧಿಸಿದ ಕಟ್ಟಡವೊಂದರ ಶೌಚಾಲಯದಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮಸೀದಿಗೆ ಸಂಬಂಧಿಸಿದ ಎರಡು ಮಹಡಿಯ ಕಟ್ಟಡದಲ್ಲಿರುವ ಕೆಲಸಗಾರರಿಗೆ ಕಟ್ಟಡ ಬದಿಯಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು, ಅಲ್ಲಿ ಎಪ್ರಿಲ್ 14 ರಂದು ನವಜಾತ ಶಿಶುವಿನ ದೇಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಸೀದಿಯ ವ್ಯವಸ್ಥಾಪಕ ಸುಹೇಲ್ ಅವರು ಶೌಚಾಲಯಕ್ಕೆ ಹೋದಾಗ ಈ ಮೃತದೇಹ ಕಂಡುಬಂದಿದ್ದು, ತಕ್ಷಣವೇ ಮಲ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳ ಪರಿಶೀಲಿಸಿದ ಪೊಲೀಸರು ಶಿಶು ಜನನಕ್ಕೆ ಮೊದಲೇ ಅಥವಾ ಬಳಿಕ ಮೃತಪಟ್ಟಿದ್ದು, ಯಾರೋ ಅಪರಿಚಿತರು ಮಗುವಿನ ಜನನ ವನ್ನು ಮರೆಮಾಚಲು ಯತ್ನಿಸಿ ಇಲ್ಲಿ ಮೃತದೇಹವನ್ನು ರಹಸ್ಯವಾಗಿ ವಿಲೇ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳೀಯ ಸಿಸಿಟಿವಿ ಪರೀಶೀಲನೆ ನಡೆಸುತ್ತಿದ್ದಾರೆ.