ಮಂಗಳೂರು: ಮಂಗಳೂರು ಮತ್ತು ಸಿಂಗಾಪುರ ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಜನವರಿ 21 ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರ ಆರಂಭಿಸಲಿದೆ. ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್‌ನ ಪ್ರಕಟಣೆ ತಿಳಿಸಿದೆ.ಇದರೊಂದಿಗೆ ಮಂಗಳೂರಿನೊAದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೇಯ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತಾಣವಾಗಿ ಸಿಂಗಾಪುರ ಗುರುತಿಸಿಕೊಳ್ಳಲಿದೆ.
ವಿಮಾನ ಸಂಖ್ಯೆ IX 0862 ಮಂಗಳೂರಿನಿಂದ 5.55 ಗಂಟೆಗೆ ಹೊರಟು 13.25 ಗಂಟೆಗೆ ಸಿಂಗಾಪುರ ತಲುಪಲಿದೆ. ವಿಮಾನ ಸಂಖ್ಯೆ IX 0861 ಸಿಂಗಾಪುರದಿಂದ 14.25 ಗಂಟೆಗೆ ಹೊರಟು 16.55 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫೆಬ್ರವರಿ 1 ರಿಂದ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿ ದಿನ ನೇರ ವಿಮಾನಯಾನ ಸೇವೆ ಒದಗಿಸಲಿದೆ. ವಿಮಾನ ಸಂಖ್ಯೆ IX 1552 ಮಂಗಳೂರಿನಿಂದ 6.40 ಗಂಟೆಗೆ ಹೊರಟು 9.35 ಗಂಟೆಗೆ ದೆಹಲಿಗೆ ತಲುಪಲಿದೆ. ವಿಮಾನ ಸಂಖ್ಯೆ IX 2768 ದೆಹಲಿಯಿಂದ 6.40 ಗಂಟೆಗೆ ಹೊರಟು ಮಂಗಳೂರಿಗೆ 9.35 ಗಂಟೆಗೆ ತಲುಪಲಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ಜನವರಿ 4 ರಿಂದ ಮಂಗಳೂರು ಮತ್ತು ಪುಣೆ ನಡುವೆ ಎರಡು ನೇರ ವಿಮಾನಗಳನ್ನು ನಿರ್ವಹಿಸಲಿದೆ. ವಿಮಾನ ಸಂಖ್ಯೆ IX 2256 ಪುಣೆಯಿಂದ 8 ಗಂಟೆಗೆ ಹೊರಟು 9.25 ಗಂಟೆಗೆ ಪುಣೆಗೆ ತಲುಪುತ್ತದೆ. ವಿಮಾನ ಸಂಖ್ಯೆ 2257 ಪುಣೆಯಿಂದ 9.55 ಗಂಟೆಗೆ ಹೊರಟು 11.40 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ವಿಮಾನ ಸಂಖ್ಯೆ 2236 ಮಂಗಳೂರಿನಿಂದ 18.30 ಗಂಟೆಗೆ ಹೊರಟು 20.00 ಗಂಟೆಗೆ ಪುಣೆಗೆ ಮತ್ತು ವಿಮಾನ ಸಂಖ್ಯೆ 2237 ಪುಣೆಯಿಂದ 20.35 ಗಂಟೆಗೆ ಹೊರಟು 22.05 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.