Share this news

ವಾಮಂಜೂರು: ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಮತ್ತು ಮಂಗಳ ಜ್ಯೋತಿ ಸಮಗ್ರಶಾಲೆ ವಾಮಂಜೂರು ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ವಾಮಂಜೂರು ಮಂಗಳ ಜ್ಯೋತಿ ಸಮಗ್ರಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಕಬಡ್ಡಿ ಕ್ರೀಡಾ ಪಟು ಆನಂದ ಶೆಟ್ಟಿ ಉದ್ಘಾಟಿಸಿದರು.ಕಬಡ್ಡಿ ಪಂದ್ಯಾಟವಾಡಲು ಧೈರ್ಯ ಮತ್ತು ಚಾಕಚಕ್ಯತೆ ಇರಬೇಕು.ಇದು ಜೀವನವನ್ನು ಸಂಭಾಳಿಸಲು ಸಹಕಾರಿ.ವಿದ್ಯಾರ್ಥಿಗಳು ಇದರಲ್ಲಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ಬಾಲಕೃಷ್ಣ ಮೂಲ್ಯ ಸೋಲೇ ಗೆಲುವಿನ ಸೋಪಾನ ಹಾಗೂ ಕ್ರೀಡೆಯಲ್ಲಿ ಶಿಸ್ತನ್ನು ಪಾಲಿಸುವ ಅವಶ್ಯಕತೆಯನ್ನು ಹೇಳುತ್ತ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ನರೇಶ್ ಮಲ್ಲಿಗೆಮಾಡು ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪ್ಯಾಸ್ ಪ್ರಾಸ್ತಾವಿಕವಾಗಿ ಮಾತಾಡಿದರು.ತಿರುವೈಲು ಸಿ.ಆರ್.ಪಿ ಪುಷ್ಪ, ಉದ್ಯಮಿ ಉದಯ್ ಕುಡುಪು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶೀಲಾವತಿ, ಸಂಘದ ಕಾರ್ಯದರ್ಶಿ ಮೋಹನ್ ಶಿರ್ಲಾಲು, ನೋಡಲ್ ಅಧಿಕಾರಿ ಪ್ರಮೋದ್ ಶೆಟ್ಟಿ, ಲ್ಯಾನ್ಸಿ ಸಿಕ್ವೇರಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ರಮೇಶ ಆಚಾರ್ಯ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್ ಕಡ್ತಲ ಧನ್ಯವಾದ ಸಲ್ಲಿಸಿದರು. ಶಿಕ್ಷಕಿ ರಮ್ಯ ಕಾರ್ಯಕ್ರಮ ನಿರ್ವಹಿಸಿದರು. ಸ್ಫರ್ಧೆಯಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದವು.

ಫಲಿತಾಂಶಗಳು

ಪ್ರೌಢಶಾಲಾ ವಿಭಾಗ ಬಾಲಕರು
ಪ್ರಥಮ: ಭಗವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಕೋಳಿಗೆ
ದ್ವಿತೀಯ: ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರು
ಬೆಸ್ಟ್ ರೈಡರ್ ಕೀರ್ತನ್ ಆನಂದಾಶ್ರಮ. ಆಲ್-ರೌಂಡರ್ ನಿಶಾಂತ್ ಭಗವತಿ, ಬೆಸ್ಟ್ ಕ್ಯಾಚರ್ ಹಿತೇಶ್ ಭಗವತಿ.

ಬಾಲಕಿಯರು:
ಪ್ರಥಮ,
ಭಗವತಿ ಪ್ರೌಢಶಾಲೆ, ಸಂಕೊಳಿಗೆ,
ದ್ವಿತೀಯ ಸೈಂಟ್ ಜೋಸೆಫ್ ಬಜಾಲ್.
ಬೆಸ್ಟ್ ರೈಡರ್ ರಿಯಾನ ಬಜಾಲ್, ಬೆಸ್ಟ್ ಕ್ಯಾಚರ್ ಸುಪೇಕ್ಷ ಭಗವತಿ. ಆಲ್ ರೌಂಡರ್ ತ್ರಿಶಾ ಭಗವತಿ.

ಪ್ರಾಥಮಿಕ ವಿಭಾಗ:
ಬಾಲಕರು,
ಪ್ರಥಮ, ಭಗವತಿ ಸಂಕೋಳಿಗೆ
ದ್ವಿತೀಯ,ಸಹಾಳರ ಅಡ್ಡೂರು.
ಬೆಸ್ಟ್ ರೈಡರ್ ಶಹಾದ್ ಸಹರ, ಬೆಸ್ಟ್ ಕ್ಯಾಚರ್ ಕಿಶನ್, ಆಲ್ ರೌಂಡರ್ ಸುವಿತ್‌ ಭಗವತಿ.

ಬಾಲಕಿಯರ ವಿಭಾಗ:
ಪ್ರಥಮ, ಭಗವತಿ ಸಂಕೊಳಿಗೆ
ದ್ವಿತೀಯ, ಸ್ಟೆಲ್ಲಾ ಮೇರಿಸ್.
ಬೆಸ್ಟ್ ರೈಡರ್ ಧನ್ಯ ಸ್ಟೆಲ್ಲಾ ಮೇರಿಸ್, ಬೆಸ್ಟ್ ಕ್ಯಾಚರ್ ತೃಪ್ತಿ ಭಗವತಿ,ಆಲ್ ರೌಂಡರ್ ಖುಷಿ ಭಗವತಿ.

 

 

 

 

    

                       in 

                          

                        

                       

Leave a Reply

Your email address will not be published. Required fields are marked *