ಕಾರ್ಕಳ: ಇನ್ನು ಕೆಲವೇ ತಿಂಗಳಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೊಬೋಟಿಕ್ ಸರ್ಜರಿ ಆರಂಭವಾಗಲಿದೆ ಎಂದು ಮಣಿಪಾಲ ಸಮೂಹ ಆಸ್ಪತ್ರೆಗಳ ಮುಖ್ಯಸ್ಥರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.
ಅವರು ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಯಲ್ಲಿ ಮಾಧ್ಯಮ ಸಂವಾದ ನಡೆಸಿ ಮಾತನಾಡಿ,ಮೂತ್ರಪಿಂಡ ಕಾಯಿಲೆ ಲಕ್ಷಣಗಳು, ಎಚ್ಚರಿಕೆ ಚಿಹ್ನೆಗಳು ಮತ್ತು ರೋಗವನ್ನು ನಿರ್ವಹಿಸುವಲ್ಲಿ ಆರಂಭಿಕ ಪತ್ತೆ ಎಷ್ಟು ಮುಖ್ಯ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗೆ ಮತ್ತು ಮೂತ್ರಪಿಂಡ ಕಾಯಿಲೆ ಗೆ ಹೇಗೆ ಸಂಬಂಧ ಈ ರೋಗವು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ, ಮೂತ್ರಪಿಂಡ ಕಾಯಿಲೆಯನ್ನು ನಿರ್ವಹಿಸುವಲ್ಲಿ ಯಾವ ಆಹಾರವು ಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು ರೋಗಿಗಳು ಅನುಸರಿಸಬೇಕಾದ ನಿರ್ದಿಷ್ಟ ಆಹಾರ ಮಾರ್ಗಸೂಚಿಗಳು ಇತರ ಕಾಯಿಲೆಯ ಔಷಧಿಗಳು ಮೂತ್ರಪಿಂಡ ತೊಂದರೆಗೆ ಕಾರಣ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಲಭ್ಯವಿರುವ ವಿವಿಧ ಚಿಕಿತ್ಸಾ ಆಯ್ಕೆ ಮೂತ್ರಪಿಂಡ ಕಸಿ, ಕಿಡ್ನಿ ತೊಂದರೆಗೆ ಪರಿಹಾರ ಕಿಡ್ನಿ ಕಸಿನಂತರ ಡಯಾಲಿಸಿಸ್ ಅವಶ್ಯಕತೆ,ಮೂತ್ರಪಿಂಡ ದಾನದ ನಂತರ ದಾನಿಗಳು ವಹಿಸಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಕಾರ್ಕಳದ TMA ಪೈ ರೋಟರಿ ಆಸ್ಪತ್ರೆಯಲ್ಲಿ ಮುಂದಿನ ಮೂರು ತಿಂಗಳೊಳಗೆ ಬ್ಲಡ್ ಬ್ಯಾಂಕ್ ಹಾಗೂ ಸಿಟಿ ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲಾಗುತ್ತದೆ ಇದರಿಂದ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಸಹ ಕುಲಾಧಿಪತಿ ಹೆಚ್ ಎಸ್ ಬಲ್ಲಾಳ್, ಡಾ ಟಿ ಎಂ ಎ ಪೈ ರೋ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ ಕೀರ್ತಿನಾಥ ಬಲ್ಲಾಳ್
ಮಾಹೆ ಉಪಕುಲಪತಿ ಡಾ ಎಂ ಡಿ ವೆಂಕಟೇಶ್, ವ್ಯವಸ್ಥಾಪಕ ಅರಹನ್ ಶೆಟ್ಟಿ ಉಪಸ್ಥಿತರಿದ್ದರು.