ಕಾರ್ಕಳ:ಮರ್ಣೆ ಗ್ರಾಮದ ಕಾಡುಹೊಳೆ ಕೋಟೆಬೈಲು ನಾಗಬನದ ಜೀರ್ಣೋದ್ಧಾರದ ಪ್ರಯುಕ್ತ ಮಾ.27 ಹಾಗೂ 28ರಂದು ನಾಗಶಿಲಾ ಪುನಃಪ್ರತಿಷ್ಠೆ ಹಾಗೂ ಚತುಃಪವಿತ್ರ ನಾಗಮಂಡಲೋತ್ಸವವು ಕಾಡುಹೊಳೆ ವೆಂಕಟರಮಣ ಭಟ್ ಹಾಗೂ ಸಾಂತ್ಯಾರು ವೇ.ಮೂ ಲಕ್ಷ್ಮೀಪ್ರಸಾದ್ ಭಟ್ ನೇತೃತ್ವದಲ್ಲಿ ನಡೆಯಲಿದೆ.
ಮಾ 27ರಂದು ಬುಧವಾರ ಬೆಳಗ್ಗೆ 8.30ರಿಂದ ದೇವತಾ ಪ್ರಾರ್ಥನೆ, ಪುಣ್ಯಾಹ ಶುದ್ಧಿ, ತೋರಣ ಮುಹೂರ್ತ,ಗಣಹೋಮ, ನವಗ್ರಹ ಶಾಂತಿ ಹೋಮ,ವಿಷ್ಣುಯಾಗ,ಬಿಂಬಶುದ್ಧಿ, ಪ್ರಸನ್ನ ಪೂಜೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಸಂಜೆ 5 ರಿಂದ ವಾಸ್ತುಪೂಜೆ, ವಾಸ್ತು ಶಾಂತಿ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ನಾಗದೇವರ ಬಿಂಬ ಶೈಯ್ಯಾಧಿವಾಸ, ದುರ್ಗಾನಮಸ್ಕಾರ ಪೂಜೆ, ನಾಗಮಂಡಲ ವೇದಿಕೆಯಲ್ಲಿ ವಾಸ್ತು ಹೋಮ, ದಿಕ್ಪಾಲ ಬಲಿ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ
ಮಾ.28ರಂದು ಗುರುವಾರ ಪುಣ್ಯಾಹ ನಾಂದಿ, ಪ್ರತಿಷ್ಠಾ ಪ್ರಧಾನ ಹೋಮ, ಬೆಳಗ್ಗೆ 9.42ಕ್ಕೆ ನಾಗದೇವರ ಬಿಂಬಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರಸನ್ನಪೂಜೆ, ಆಶ್ಲೇಷಾ ಬಲಿದಾನ,ಪ್ರಸಾದ ವಿತರಣೆಯ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.15ರಿಂದ ನಾಗದೇವರಿಗೆ ಕ್ಷೀರಾರ್ಘ್ಯ ಪ್ರಧಾನಪೂರ್ವಕ ಹಾಲಿಟ್ಟು ಸೇವೆ, ಬಳಿಕ ಚತುಃಪವಿತ್ರ ನಾಗಮಂಡಲ ಸೇವೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದ್ದು ಈ ಪುಣ್ಯಕಾರ್ಯದಲ್ಲಿ ಭಕ್ತಾಭಿಮಾನಿಗಳು ಭಾಗಿಯಾಗಬೇಕೆಂದು ಎಂದು ಸೇವಾದಾರರಾದ ರಮಾಕಾಂತ ಪ್ರಭು ಮತ್ತು ಕುಟುಂಬಸ್ಥರು ಹಾಗೂ ಸದಾನಂದ ಪ್ರಭು,ರಾಮಚಂದ್ರ ಪ್ರಭು, ಸಚಿನ್ ಪ್ರಭು ಬಾಂಡೂಪ್ ಮುಂಬಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.