ಯೆಮೆನ್ : ಯೆಮೆನ್ ದೇಶದ ಅಡೆನ್ ಬಳಿ ಆಫ್ರಿಕಾದ ಹಾರ್ನ್ ನಿಂದ ವಲಸಿಗರಿದ್ದ ದೋಣಿ ಮಗುಚಿ 38 ಜನ ಜಲ ಸಮಾಧಿಯಾಗಿ 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.
ಅಡೆನ್ ಪೂರ್ವದಲ್ಲಿರುವ ಶಾಬ್ವಾ ಪ್ರಾಂತ್ಯದ ಕರಾವಳಿಯನ್ನು ತಲುಪುವ ಮೊದಲು ದೋಣಿ ಮುಳುಗಿದೆ ಎಂದು ರುಡುಮ್ ಜಿಲ್ಲೆಯ ನಿರ್ದೇಶಕ ಹಾದಿ ಅಲ್-ಖುರ್ಮಾ ತಿಳಿಸಿದ್ದಾರೆ. ಮೀನುಗಾರರು ಮತ್ತು ಸ್ಥಳೀಯ ನಿವಾಸಿಗಳು 78 ವಲಸಿಗರನ್ನು ರಕ್ಷಿಸಿದ್ದಾರೆ ಎಂದು ಹಾದಿ ಅಲ್-ಖುರ್ಮಾ ಹೇಳಿದರು. ಅದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 100 ಜನರು ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು. ಶೋಧಕಾರ್ಯ ಮುಂದುವರಿದಿದ್ದು ಮತ್ತು ಘಟನೆಯ ಬಗ್ಗೆ ವಿಶ್ವಸಂಸ್ಥೆಗೆ ಮಾಹಿತಿ ನೀಡಲಾಗಿದೆ.