
ಕಾರ್ಕಳ, ಜ.03: ಮಹಾರಾಷ್ಟ್ರದ ನಾಸಿಕ್ ನಲ್ಲಿ ವಾಸವಿದ್ದ ಕಾರ್ಕಳ ತಾಲೂಕು ಮಿಯ್ಯಾರು ಮೂಲದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದು ನಾಸಿಕ್ ನಿಂದ ಮಿಯ್ಯಾರು ಕುಂಟಿಬೈಲಿನ ತಮ್ಮ ಮನೆಗೆ ಬರುವ ವೇಳೆಗೆ ಮೃತಪಟ್ಟಿದ್ದಾರೆ.
ಕುಂಟಿಬೈಲಿನ ನೊನೆಟ್ ಸಿಲ್ವೆಸ್ಟರ್ ಡಿ’ಸೋಜಾ (56) ಮೃತಪಟ್ಟವರು. ಅವರು ಪತ್ನಿಯೊಂದಿಗೆ ನಾಸಿಕ್ ನಲ್ಲಿ ವಾಸವಿದ್ದು, ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಜ.1 ರಂದು ಅಂಬುಲೆನ್ಸ್ ನಲ್ಲಿ ಮಿಯ್ಯಾರಿಗೆ ಬರುತ್ತಿದ್ದ ವೇಳೆ ದಾರಿಮಧ್ಯೆ ಮೃತಪಟ್ಟಿದ್ದಾರೆ.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
