ಹೆಬ್ರಿ, ಆ 13: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಸೀತಾನದಿ ನಂದಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ವಿವಾದದ ಕುರಿತು ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರ ಕುಟುಂಬದ ಸದಸ್ಯರಿಗೆ ದೇವಸ್ಥಾನದ ಒಳಗೆ ಪ್ರವೇಶಿಸದಂತೆ ತಡೆದು ಜೀವ ಬೆದರಿಕೆಯೊಡ್ಡಿರುವ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರದ ಚಾಂತಾರು ಗ್ರಾಮದ ಸುಪ್ರೀತ್ ಹಾಗೂ ಅವರ ಕುಟುಂಬಕ್ಕೆ ವಿಜಯ್ ಹಾಗೂ ಅವರ ಸ್ನೇಹಿತರ ತಂಡ ಜೀವ ಬೆದರಿಕೆ ಹಾಕಿದ್ದಾರೆ.
ಸುಪ್ರೀತ್ ಅವರ ಅಜ್ಜಿ ಮನೋರಮಾ ನಾಡ್ಪಾಲು ಗ್ರಾಮದ ನಂದಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರಾಗಿದ್ದು, ಸುಪ್ರೀತ್ ಹಾಗೂ ಕುಟುಂಬದ ಸದಸ್ಯರು ಆ 12 ರಂದು ಮಂಗಳವಾರ ಮದ್ಯಾಹ್ನ 12:30ಕ್ಕೆ ನಂದಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಗೆ ಹೋಗಲು ಕಾರಿನಲ್ಲಿ ಕುಳಿತುಕೊಂಡಿರುವಾಗ ವಿಜಯ ಮತ್ತು ಅವನ ಜೊತೆ ಇರುವ ಕೆಲವರು ಬಳಿ ಬಂದು ಕಾರನ್ನು ತಡೆದು ಜೀವ ಬೆದರಿಕೆ ಹಾಕಿ ದೇವಸ್ಥಾನದ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸುಪ್ರೀತ್ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.