ಮೂಡಬಿದಿರೆ : ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಪಿಯು ವಿದ್ಯಾರ್ಥಿನಿಗೆ ಕತ್ತರಿಯಿಂದ ಯುವಕನೊಬ್ಬ ಇರಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಸೋಮವಾರ ನಡೆದಿದೆ.ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಯುವತಿಗೆ ಯುವಕನೊಬ್ಬ ಕತ್ತರಿಯಿಂದ ಇರಿದಿದ್ದಾನೆ.ಸದ್ಯ ಯುವಕನನ್ನು ಪೊಲೀಸರು ಬಂಧಿಸಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತುಮಕೂರು ಮೂಲದ ಮಂಜುನಾಥ್ ಮತ್ತು ವಿದ್ಯಾರ್ಥಿನಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪಿಯುಸಿಯ ವರೆಗೆ ಇಬ್ಬರೂ ಆಳ್ವಾಸ್ ಕಾಲೇಜಿನಲ್ಲಿ ಜೊತೆಗೇ ಓದುತ್ತಿದ್ದರು.ಬಳಿಕ ಯುವತಿ ವಿದ್ಯಾಭ್ಯಾಸ ಮುಂದುವರೆಸಿದ್ದು ಯುವಕ ಕಾಲೇಜು ಬಿಟ್ಟಿದ್ದ. ಇವರಿಬ್ಬರ ಪ್ರೇಮದ ವಿಚಾರ ಯುವತಿಯ ಮನೆಯಲ್ಲಿ ಗೊತ್ತಾಗಿ ಆಕೆಯ ಮೊಬೈಲ್ ಪಡೆದು ಬುದ್ಧಿವಾದ ಹೇಳಿದ್ದರು. ಆದರೆ ತನ್ನ ಪ್ರೀತಿ ಮೊಟಕುಗೊಂಡಾಗ ಕುಪಿತನಾದ ಮಂಜುನಾಥ್ ಈಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಎನ್ನಲಾಗಿದೆ. ಅದಕ್ಕಾಗಿ ಮೂಡುಬಿದಿರೆಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದ ಮಂಜುನಾಥ್ ಯುವತಿಯನ್ನು ಪ್ರಯತ್ನಿಸಿದ್ದ. ಆದರೆ ಯುವತಿ ಅದಕ್ಕೆ ಒಪ್ಪದೇ ಇದ್ದಾಗ ಮಂಜುನಾಥ್ ನೇರವಾಗಿ ತರಗತಿಗೇ ನುಗ್ಗಿ ಕತ್ತರಿಯಿಂದ ಇರಿದಿದ್ದಾನೆ.
ಕೂಡಲೇ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಮೂಡುಬಿದಿರೆ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿದ್ದು ತನಿಖೆ ಮುಂದುವರೆದಿದೆ.















`
