Share this news

ಬೆಂಗಳೂರು: ಮುಡಾ ಭೂ ಹಗರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದರು. ಇಡಿ ಅಧಿಕಾರಿಗಳು ಕೂಡ ಪ್ರಕರಣದ ಕುರಿತು ತೀವ್ರ ಶೋಧ ನಡೆಸುತ್ತಿದ್ದಾರೆ. ಸದ್ಯ ಈ ವಿಚಾರವಾಗಿ ಸೆಪ್ಟೆಂಬರ್ 24ರ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಏಕಸದಸ್ಯ ಪೀಠದ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.

ತನಿಖೆಯ ಅಖಾಡಕ್ಕಿಳಿದಿರುವ ಕೇಂದ್ರದ ಜಾರಿನಿರ್ದೇಶಾನಲಯ ಇತ್ತೀಚೆಗೆ ಹಲವು ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿತ್ತು. ಅಕ್ಟೋಬರ್ 18, 19ರಂದು ಎರಡು ದಿನ ನಡೆಸಿದ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಿ ಬಂಡಲ್ ಗಟ್ಟಲೆ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ.

ಲೇಔಟ್ ನಿರ್ಮಾಣಕ್ಕಾಗಿ ಕೆಸರೆ ಗ್ರಾಮದ 462ನೇ ಸರ್ವೇ ನಂಬರ್ ನಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಮುಡಾ ತನ್ನ ಸುಪರ್ದಿಗೆ ತಗೆದುಕೊಂಡಿತ್ತು. ಆದರೆ, ಸ್ವಾಧೀನಪಡಿಸಿಕೊಳ್ಳುವಾಗ ತಮಗೆ ಮಾಹಿತಿ ನೀಡಿಲ್ಲ. ಹಾಗಾಗಿ, ತಮಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಪಾರ್ವತಿ ಸಿದ್ದರಾಮಯ್ಯನವರು ಮುಡಾ ಕಡೆಯಿಂದ ಪರಿಹಾರದ ರೂಪವಾಗಿ 2021ರಲ್ಲಿ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಬೆಲೆಬಾಳುವ 14 ಸೈಟುಗಳನ್ನು ಖರೀದಿಸಿದ್ದರು. ಅವರ ಹೆಸರಿಗೆ ಆ ಸೈಟುಗಳ ಖಾತೆಯನ್ನೂ ಮಾಡಿಸಿಕೊಡಲಾಗಿತ್ತು.ಪರಿಹಾರ ರೂಪವಾಗಿ ಅವರಿಗೆ ಸೈಟುಗಳನ್ನು ಕೊಟ್ಟು ಅವರಿಗೆ ಖಾತೆಯನ್ನೂ ಮಾಡಿಸಿರುವ ಮುಡಾ, ಇತ್ತ, ಬಡಾವಣೆಗಾಗಿ ತಾನು ವಶಪಡಿಸಿಕೊಂಡಿದ್ದ ಭೂಮಿಯ ಮಾಲೀಕತ್ವವನ್ನು ತಿದ್ದುಪಡಿ ಮಾಡಿಯೇ ಇಲ್ಲ. ಅದರಿಂದಾಗಿ, ವಶಪಡಿಸಿಕೊಂಡು ಬಡಾವಣೆ ನಿರ್ಮಿಸಲಾಗಿರುವ ಭೂಮಿಯ ಮಾಲೀಕತ್ವ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇದೆ.

 

 

Leave a Reply

Your email address will not be published. Required fields are marked *