ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಮನೆಯ ಬೀಗ ತೆಗೆದು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದಿರುವ ಘಟನೆ ಶುಕ್ರವಾರ ನಡೆದಿದೆ.
ಗುರ್ಗಲ್ ಗುಡ್ಡೆಯ ಶ್ರೀಮತಿ ಪ್ರಭಾ ಎಂಬವರು ಯಾವಾಗಲೂ ತಮ್ಮ ಮನೆಗೆ ಬೀಗ ಹಾಕಿ, ಬೀಗದ ಕೀಯನ್ನು ಹೊರಗೆ ಡಬ್ಬಿಯಲ್ಲಿ ಇಡುತ್ತಿದ್ದರು. ಎಂದಿನAತೆ ಆ.30 ಶುಕ್ರವಾರದಂದು ಅವರು ಮನೆಗೆ ಬೀಗ ಹಾಕಿ ಕೀಯನ್ನು ಡಬ್ಬಿಯಲ್ಲಿ ಇಟ್ಟು ಹೋಗಿದ್ದಾಗ ಕಳ್ಳರು ಕೀ ಸಹಾಯದಿಂದ ಮನೆಯ ಬಾಗಿಲನ್ನು ತೆಗೆದು ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್ ರೂಮ್‌ನ ಗೋದ್ರೇಜ್‌ನ ನಲ್ಲಿ ಇರಿಸಿದ್ದ ಗೋದ್ರೇಜ್ ಲಾಕರನ್ನು ತೆರೆದು ಲಾಕರಿನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ ಅಂದಾಜು ರೂ. 10,05,000 ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.