ಕಾರ್ಕಳ : ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ ಸಂಗ್ರಹಣೆ , ಮಾರಾಟ ಬಳಕೆ ನಿಷೇಧ ಕಾಯ್ದೆ ಅನ್ವಯ ಕಾರ್ಕಳ ಪುರಸಭಾ ಅಧಿಕಾರಿಗಳು ಅಂಗಡಿ ಮುಂಗ್ಗಟ್ಟು, ಹೋಟೆಲ್ ,ಮಾರ್ಕೆಟ್ ಗಳಿಗೆ ಪುರಸಭಾ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಯವರ ನೇತೃತ್ವದಲ್ಲಿ ಸಿಬ್ಬಂದಿಗಳು ಬುಧವಾರ ಮಧ್ಯಾಹ್ನ
ದಾಳಿ ನಡೆಸಿ ಸುಮಾರು 5 ಕೆಜಿಗಳಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ವ್ಯಾಪಾರಿಗಳಿಂದ ಸುಮಾರು 8800 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಪುರಸಭಾ ಕಂದಾಯ ಅಧಿಕಾರಿ ಅಶೋಕ್, ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಜಿ, ಪರಿಸರ ಅಭಿಯಂತರ ಜ್ಯೋತಿಶ್ವರಿ, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ಥಾಮಸ್, ಸಮುದಾಯ ಸಂಘಟಕ ಮಲ್ಲಿಕಾ ಪುರಸಭಾ ಸಿಬ್ಬಂದಿಗಳಾದ ಅಮೃತ ,ಲೋಲಾಕ್ಷಿ, ಜಗನ್ನಾಥ್ ಶೆಟ್ಟಿ, ಕೀರ್ತಿ, ಪ್ರಥ್ವಿ , ಪೌರಕಾರ್ಮಿಕರು ಉಪಸ್ಥಿತರಿದ್ದರು















