ಹೆಬ್ರಿ : ತಾಲೂಕಿನ ಮುನಿಯಾಲಿನಲ್ಲಿ ಲೋಕಸಭಾ ಸದಸ್ಯರ ಅನುದಾನ ಹಾಗೂ ಹೆಬ್ರಿ ತಾಲೂಕು ಪಂಚಾಯತ್ ನ ಅನುದಾನದಲ್ಲಿ ಸುಮಾರು ರೂ.17.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ಅಂಗನವಾಡಿ ಕಟ್ಟಡವನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಅಮೀನ್ ಅಂಡಾರು, ಉಪಾಧ್ಯಕ್ಷರಾದ ಪ್ರಮಿಳ ನಾಯ್ಕ್, ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಜ್ಯೋತಿ ಹರೀಶ್, ಉದ್ಯಮಿ ದಿನೇಶ್ ಪೈ, ಡಾಕ್ಟರ್ ಸುದರ್ಶನ್ ಹೆಬ್ಬಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವಿಜಯ ನಾರಾಯಣಿ ನಾಯ್ಕ್, ಸುರೇಂದ್ರ ಶೆಟ್ಟಿ, ಅಂಗನವಾಡಿ ಶಿಕ್ಷಕಿ ಉಷಾ ಮತ್ತು ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಟ್ಟಡದ ಗುತ್ತಿಗೆದಾರರದ ಸಮೃದ್ಧಿ ಪ್ರಕಾಶ್ ಶೆಟ್ಟಿ ಮುನಿಯಾಲು ಇವರನ್ನು ಶಾಶಸಕರು ಶಾಲು ಹೊದಿಸಿ ಸನ್ಮಾನಿಸಿದರು.