

ಹೆಬ್ರಿ ಆ,14: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲುಬೈಲು ಸಮೀಪದ ಹಾಡಿಯಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 6 ಮಂದಿ ಆರೋಪಿಗಳನ್ನು ಹೆಬ್ರಿ ಪೊಲೀಸರು ಬಂಧಿಸಿ,ಇಸ್ಪೀಟು ಎಲೆ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಮುನಿಯಾಲು ವೈನ್ ಶಾಪ್ ಸಮೀಪದ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರು ದಾಳಿ ನಡೆಸಿ ಜುಗಾರಿಯಲ್ಲಿ ನಿರತರಾಗಿದ್ದ ಉದಯ ನಾಯ್ಕ ಮುನಿಯಾಲು, ಶಿವರಾಮ ಶೆಟ್ಟಿ, ಕಿರಣ ನಾಯ್ಕ, ಆನಂದ, ಅಶೋಕ ಶೆಟ್ಟಿ ಕಾಡುಹೊಳೆ, ಸುರೇಶ ನಾಯ್ಕ ಮುನಿಯಾಲು ಇವರನ್ನು ವಶಕ್ಕೆ ಪಡೆದುಕೊಂಡು,ಅವರಿಂದ 3,390 ರೂ ನಗದು, ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.



