ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿವಾದಾತ್ಮಕ ಪೋಸ್ಟ್ ವಿಚಾರದಲ್ಲಿ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಹಾಗೂ ಡಿಸಿಪಿ ಕಾರಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪ್ರಕರಣ ಕುರಿತಂತೆ ಸಿಸಿಬಿ ಪೊಲೀಸರು 8 ದುಷ್ಕರ್ಮಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಮೈಸೂರಿನ ಶಾಂತಿನಗರ ಸುಹೇಲ್ ಆಲಿಯಾಸ್ ಸೈಯದ್ ಸುಹೇಲ್, ರಹೀಲ್ ಪಾಷಾ, ಸತ್ಯನಗರದ ಇಜಾಜ್, ಮೈಸೂರಿನ ಗೌಸಿಯಾ ನಗರದ ನಿವಾಸಿ ಸಯ್ಯದ್ ಸಾದಿಕ್, ರಾಜೀವ್ ನಗರದ ಸಾದಿಕ್ ಪಾಷಾ ಆಲಿಯಾಸ್ ಖಾಲಿ, ಅರ್ಬಾಜ್ ಷರೀಫ್, ಶೋಹೆಬ್ ಪಾಷಾ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದರು. ಈ ಘಟನೆಯ ಕುರಿತಂತೆ ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿದೆ ಎನ್ನುವ ಆರೋಪಗಳು ಕೂಡ ಕೇಳಿಬಂದಿತ್ತು. ಪೊಲೀಸರು ಈಗಾಗಲೇ ಗಲಭೆ ನಡೆದ ದಿನದ ಸಾಕಷ್ಟು ವಿಡಿಯೋಗಳನ್ನು ಕಲೆಹಾಕಿದ್ದು, ಈ ಪೈಕಿ 8 ಜನರ ಬಂಧನವಾಗಿದ್ದು,ಈ ಪ್ರಕರಣ ಸಂಬAಧ ಇನ್ನೂ ಹಲವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.