ಕಾರ್ಕಳ: ತಾಲೂಕಿನ ನಂದಳಿಕೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನಂದಳಿಕೆ ನಿವಾಸಿ ಸಂತೋಷ ಆಚಾರ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಸಂತೋಷ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು ಪ್ರತಿ ವರ್ಷದಂತೆ ಈ ಬಾರಿಯೂ ಸೆ. 30 ಮನೆಯಲ್ಲಿ ನವರಾತ್ರಿ ಪೂಜೆ ನಡೆಸಿದ್ದರು. ಸಂತೋಷ ಆಚಾರ್ಯ ಅವರು ಮದ್ಯಪಾನ ಮಾಡಿದ್ದ ಕಾರಣ ಅವರ ಅಣ್ಣನ ಮಗ ದೀಪಕ್ ಪೂಜೆಗೆ ಕುಳಿತಿದ್ದರು. ಪೂಜೆ ಮುಗಿದ ಬಳಿಕ ಎಲ್ಲರೂ ಅವರವರ ಕೆಲಸದಲ್ಲಿದ್ದು ಸಂತೋಷ ಆಚಾರ್ಯ ಏಕಾಏಕಿ ಮನೆಯೊಳಗೆ ಹೋಗಿ ಕಬ್ಬಿಣದ ಜಂತಿಗೆ ನೇಣು ಹಾಕಿಕೊಂಡಿದ್ದಾರೆ.
ಮನೆಯವರು ಕೂಡಲೇ ಅವರನ್ನು ನೇಣಿನಿಂದ ಇಳಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.