ಕಾರ್ಕಳ: ಪರಸ್ಪರ ಯುವಕ ಮಂಡಲ ಈದು -ನಾರಾವಿ ನೇತೃತ್ವದಲ್ಲಿ ಡಿ.22 ರಂದು ನಡೆಯುವ ನಾರಾವಿ ಮಹಾ ಚಂಡಿಕಾ ಯಾಗದ ಪ್ರಥಮ ಕಾರ್ಯಕ್ರಮ ಪೋಸ್ಟರ್ ಬಿಡುಗಡೆಯು ಇಂದು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನಡೆಯಿತು
ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಕೃಷ್ಣ ತಂತ್ರಿ, ನಾರಾವಿ ಶ್ರೀ ಧರ್ಮನಾಥ ಸ್ವಾಮಿ ಜಿನ ಚೈತ್ಯಾಲಯದ ಅಧ್ಯಕ್ಷ ನಿರಂಜನ ಅಜ್ರಿ ರಾಮೇರಗುತ್ತು, ಭಂಡಾರಿ ಸಮಾಜದ ಪ್ರಮುಖರಾದ ಸುಧಾಕರ ಭಂಡಾರಿ, ನಾರಾವಿ ಬಿಲ್ಲವ ಸಮಾಜದ ಗುರಿಕಾರರಾದ ಸುರೇಶ್ ಬಾಂದೊಟ್ಟು ಹೊಸ್ಮಾರು ಕುಲಾಲ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್, ಈದು ಬಂಟರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿ, ನಾರಾವಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ಯ, ನಾರಾವಿ ದೇವಾಡಿಗ ಸಂಘದ ಅಧ್ಯಕ್ಷ ರಾಘು ದೇವಾಡಿಗ ಓಮಾಜೆ, ನಾರಾವಿ ಹೆಗ್ಡೆ ಸಮಾಜದ ಪ್ರಮುಖರಾದ ಶೇಖರ ಹೆಗ್ಡೆ ದೇವಸ ಮನೆ,ಹರಿಸೇವಾ ಭಜನಾ ಸಮಿತಿಯ ಗೌರವಾಧ್ಯಕ್ಷರಾದ ಸುಧಾಕರ(ಕಿಟ್ಟು) ಮಂಜುನಗರ, ನಾರಾವಿ ಪಂಡಿತರಾದ ವಸಂತ ಪಡ್ಡಾಯಿ ಕಾಪು, ಈದು ಮಡಿವಾಳ ಸಮಾಜದ ಬಾಬು ಮಡಿವಾಳ, ನಾರಾವಿ ಸೇರಿಗಾರ ಸಮಾಜದ ಪ್ರಮುಖರಾದ ಸದಾನಂದ ಸೇರಿಗಾರ ಹಟ್ಯಡ್ಕ ಮನೆ, ಈದು ಅಲಿಮಾರು ಗುಡ್ಡೆಯ ಶ್ರೀ ಬ್ರಹ್ಮ ಮೊಗೇರ ದೈವಸ್ಥಾನದ ಸುಂದರ ಬಿ., ನಾರಾವಿ ಮಲೆಕುಡಿಯ ಸಮಾಜದ ಪ್ರಮುಖರಾದ ಅಣ್ಣಿ ಮಲೆಕುಡಿಯ ಕುಳಂತಾಜೆ, ಮುರೋಡಿ ದೈವನರ್ತಕರಾದ ಸುರೇಶ ಪರವ, ಸದಾನಂದ ಕೊರಗ, ಪರಸ್ಪರ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ, ಉಪಾಧ್ಯಕ್ಷರಾದ ಪ್ರವೀಣ್ ದೇವಾಡಿಗ, ಗುರು ಪ್ರಸಾದ್ ನಾರಾವಿ, ಜಗದೀಶ್ ಅಂಚನ್, ಡಾ ಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅಶೋಕ್ ಎಂ ಕೆ ಹಾಗೂ ಪ್ರದೀಪ್ ಎಂ ಕೆ ಕಾರ್ಯಕ್ರಮ ನಿರೂಪಿಸಿದರು.
in