ಕಾರ್ಕಳ: ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಅತ್ಯಂತ ಕಠಿಣ ಪರಿಶ್ರಮ ಹಾಗೂ ನಗುಮುಖದ ಸೇವೆಯು ಮುಖ್ಯವಾಗಿರುತ್ತದೆ ಎಂದು ಖ್ಯಾತ ತುಳು ಚಿತ್ರ ನಟ ಭೋಜರಾಜ್ ವಾಮಂಜೂರು ಹೇಳಿದರು.
ಅವರು ಕಾರ್ಕಳದ ಶಿವತಿಕೆರೆಯ ಸವಿತಾ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ಶುಭಾರಂಭವಾದ ವಿಂಟೇಜ್ ಹೋಟೆಲ್ ಉದ್ಘಾಟಿಸಿ ಮಾತನಾಡಿ, ಹೊಟೇಲ್ ಉದ್ಯಮವು ಅತ್ಯಂತ ಸವಾಲಿನ ಕ್ಷೇತ್ರವಾಗಿದ್ದು, ಇಲ್ಲಿ ಹೆಸರು ಹಾಗೂ ಲಾಭ ಗಳಿಸಲು ಬಹಳಷ್ಟು ಪರಿಶ್ರಮ ಪಡಬೇಕು, ಆದ್ದರಿಂದ ಆಹಾರದ ಗುಣಮಟ್ಟ, ರುಚಿ ಶುಚಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್’ಸಾರ್, ಅಮ್ಮನ ನೆರವು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅವಿನಾಶ್ ಶೆಟ್ಟಿ, ಶಿವಣ್ಣ ಶೆಟ್ಟಿ, ಸತೀಶ್ ದೇವಾಡಿಗ, ಸತೀಶ್ ರಾವ್ ಪೋಸ್ಟ್ ಮ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಹೊಟೇಲ್ ವಿಂಟೇಜ್ ಮಾಲಕ ರಾಜೇಶ್ ಸುವರ್ಣ ದಂಪತಿ ಅತಿಥಿಗಳನ್ನು ಸ್ವಾಗತಿಸಿದರು.