ಕಾರ್ಕಳ:ತಾಲೂಕಿನ ನಿಟ್ಟೆ ಎಂಬಲ್ಲಿ ಮನೆಯಿಂದ ಹೊರಗೆ ಹೋಗಿದ್ದ ಯುವಕನೊಬ್ಬ ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ.
ನಿಟ್ಟೆಯ ಆಸ್ವಲ್ಡ್ ಕಿಶೋರ್ ಎಂಬವರ ಪುತ್ರ ಕ್ಲಿಫರ್ಡ್ ಮೆಲ್ರಾಯ್(33) ಆ. 12ರಂದು ಬೆಳಿಗ್ಗೆ ಮನೆಯಿಂದ ಪಡುಬಿದ್ರೆಗೆ ಹೋಗಿ ಬರುವುದಾಗಿ ಹೇಳಿ ತನ್ನ ದ್ವಿಚಕ್ರ ವಾಹನದಲ್ಲಿ ಹೋದವರು ವಾಪಾಸು ಮನೆಗೆ ಬರದೇ ನಾಪತ್ತೆಯಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















`
