Share this news

ಕಾರ್ಕಳ: ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.) ನಿಟ್ಟೆ ಇದರ ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ  ವಿಶ್ವಕರ್ಮ ಪೂಜಾ ಮಹೋತ್ಸವವು ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ಸೆ.22 ರಂದು ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ, ಬೋಳಾ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ ಜರುಗಿತು.

ಮುಖ್ಯ ಅತಿಥಿಗಳಾದ ಉಡುಪಿ ಹಾಗೂ ದ.ಕ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಮಂಗಳೂರು ವಿಭಾಗದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಆಶಾ ಉಮೇಶ್ ಗುರೂಜಿ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ಹರ್ಷವರ್ಧನ್ ಆಚಾರ್ಯ ನಿಟ್ಟೆ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು.

ಖ್ಯಾತ ವಾಗ್ಮಿ, ಸಾಮಾಜಿಕ ಚಿಂತಕರು, ಬಹುಬೇಡಿಕೆಯ ನಿರೂಪಕರಾದ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಹಾಗೂ ನಿಟ್ಟೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಪಿ. ಎನ್. ಶೋಭಾ ಆಚಾರ್ಯ ಇವರಿಗೆ “ಪ್ರೇರಣಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 58 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ನಿಟ್ಟೆ ವಿಶ್ವಕರ್ಮ ಸಂಘದ ಜೊತೆ ಸಮಾಜ ಸೇವೆಯಲ್ಲಿ ಕೈ ಜೋಡಿಸಿರುವ ಕೆಮ್ಮಣ್ಣು ತೆಂಕುಮನೆ ಶ್ರೀಮತಿ ರತ್ನಾವತಿ ಮತ್ತು ಮೋನಯ್ಯ ಆಚಾರ್ಯ ಇವರ ಸ್ಮರಣಾರ್ಥ ಇವರ ಮೊಮ್ಮಕ್ಕಳಿಂದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ವಿದ್ಯಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ದಾಮೊದರ ಶರ್ಮಾರು ಉಪನ್ಯಾಸ ನೀಡಿದರು. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಮಾತನಾಡಿ, ನಿಟ್ಟೆ ಸಮಿತಿಯವರು ವಿಶ್ವಕರ್ಮ ಪೂಜೆಯನ್ನು ಕೇವಲ ವಿಶ್ವಕರ್ಮರಿಗೆ ಸೀಮಿತವಾಗಿರಿಸದೆ, ಸಾರ್ವಜನಿಕರನ್ನು ಒಗ್ಗೂಡಿಸಿ ವಿಶ್ವಕರ್ಮ ಪೂಜೆ ಮಾಡಿರುವುದು ನಮ್ಮೆಲ್ಲರಿಗೂ ಮಾದರಿಯಾಗಿದೆ. ಎಲ್ಲದರಲ್ಲೂ ಹೊಸ ತನವನ್ನು ತರುವಲ್ಲಿ ಮುಂಚೂಣಿಯಲ್ಲಿರುವ ಸಂಘ ಎಂದರೆ ನಿಟ್ಟೆ ಸಂಘ ಎಂದು ನಿಟ್ಟೆ ಸಂಘದ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ನಾವೆಲ್ಲರೂ ಒಗ್ಗಟ್ಟಾಗಿದ್ದು ಸನಾತನ ಧರ್ಮವನ್ನು ಉಳಿಸಬೇಕು ಹಿಂದೂ ಧರ್ಮವನ್ನು ಬೆಳೆ ಬೇಕು ಎಂದರು.

ಸಮಿತಿಯ ಅಧ್ಯಕ್ಷರಾದ ಹರ್ಷವರ್ಧನ್ ಆಚಾರ್ಯ ನಿಟ್ಟೆ ಮಾತನಾಡಿ, ಸಮಿತಿಯ ಯಶಸ್ಸು ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಶ್ರಮದ ಫಲ ಮಾತ್ರ ಆಗಲು ಸಾಧ್ಯವಿಲ್ಲ, ಇದು ಎಲ್ಲಾ ಸದಸ್ಯರ ಶ್ರಮದ ಫಲ, ಸಮಾಜ ಸೇವೆಯೇ ನಿಟ್ಟೆ ವಿಶ್ವಕರ್ಮ ಸಂಘದ ಮುಖ್ಯ ಉದ್ದೇಶ, ಸಮಾಜ ಸೇವೆಯ ಸ್ಪಷ್ಟ ಗುರಿಯಿದೆ.ಬಡವ ಶ್ರೀಮಂತನೆAಬ ಬೇಧವಿಲ್ಲ ಇಲ್ಲಿ ಸಮಾನತೆಯ ತತ್ವವಿದೆ, ಸಂಘದ ವ್ಯವಹಾರಗಳಲ್ಲಿ ನೂರು ಶೇಕಡಾ ಪಾರದರ್ಶಕತೆ ಇದೆ, ಮಿತ್ರ ಸಮುದಯಗಳೊಂದಿಗೆ ಸೌಹರ್ದತೆಯ ನಂಟಿದೆ ಇದೇ ನಮ್ಮ ಸಂಘದ ಶಕ್ತಿ, ಈ ಎಲ್ಲಾ ಕಾರಣಕ್ಕೆ ನಿಟ್ಟೆ ವಿಶ್ವಕರ್ಮ ಸಂಘ ಯಶಸ್ಸಿನ ಹಾದಿಯಲ್ಲಿದೆ ಎಂದರು.

ವಿಶ್ವಕರ್ಮ ಒಕ್ಕೂಟದ ಕೋಶಾಧಿಕಾರಿ ಜನಾರ್ಧನ ಎಸ್. ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರುಗಳಾದ ರಾಮಚಂದ್ರ ಆಚಾರ್ಯ, ರವಿ ಆಚಾರ್ಯ, ಸುರೇಶ್ ಆಚಾರ್ಯ ನಿಟ್ಟೆ, ಹರೀಶ್ ಆಚಾರ್ಯ ನೆಲ್ಲಿಕಾರು, ಸಮಿತಿಯ ಗೌರವಾಧ್ಯಕ್ಷರಾದ ವಿಶ್ವನಾಥ ಆಚಾರ್ಯ ನಿಟ್ಟೆ, ಉಪಾಧ್ಯಕ್ಷರಾದ ಈಶ್ವರ್ ಬಡಿಗೇರ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷರಾದ ವತ್ಸಲಾ ಉಮೇಶ ಆಚಾರ್ಯ, ಗೌರವಾಧ್ಯಕ್ಷರಾದ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷರಾದ ಉದಯ ಸುಧಾಕರ ಆಚಾರ್ಯ, ಹಾಗೂ ಕಾರ್ಯದರ್ಶಿ ಆಶಾ ಜಯಾನಂದ ಆಚಾರ್ಯ, ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಆಚಾರ್ಯ ಪರಪ್ಪಾಡಿ, ಉಪಾಧ್ಯಕ್ಷರಾದ ಸುಧೀರ್ ಆಚಾರ್ಯ ಕಲ್ಯಾ ಹಾಗೂ ವಿವಿಧ ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ಕೋಶಾಧಿಕಾರಿ ಜಯಾನಂದ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರಸಾದ್ ಆಚಾರ್ಯ, ಕುಮಾರಿ ಶ್ರೇಯಾ, ಸೃಜಾ ಕಾರ್ಯಕ್ರಮ ನಿರೂಪಿಸಿ, ದಿವಾಕರ ಆಚಾರ್ಯ ಕೆಮ್ಮಣ್ಣು ವಂದಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಬಳಿಕ ನಿಟ್ಟೆ ಸಮಿತಿಯ ಯುವ ಕಲಾವಿದ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಇವರ ಮೆಲೋಡಿ ಮ್ಯೂಸಿಕಲ್ ತಂಡ ಹಾಗೂ ಸಮಾಜ ಬಾಂಧವರಿAದ ವಿವಿಧ ಮನೋರಂಜನೆಯ ಕಾರ್ಯಕ್ರಮಗಳೊಂದಿಗೆ ಸಮಾರಂಭ ಸಂಪನ್ನಗೊAಡಿತು.

                       in 

Leave a Reply

Your email address will not be published. Required fields are marked *