Share this news

ಕಾರ್ಕಳ,ಡಿ.8: ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಹಾಗೂ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ “ಅಡಿಕೆ ಮತ್ತು ಕೋಕೋ ಬೆಳೆಗಳ ವಿಚಾರ ಸಂಕಿರಣ” ಹಾಗೂ “ಹವಾಮಾನ ಆಧಾರಿತ ಕೃಷಿ – ರೈತ ಜಾಗೃತಿ ಕಾರ್ಯಕ್ರಮವವು ಜ.11ರ ಭಾನುವಾರ ಹೊಸ್ಮಾರು, ಬಲ್ಯೊಟ್ಟು ಗುರುಕೃಪಾ ಪಿ.ಯು. ಕಾಲೇಜು ಸಭಾಭವನದಲ್ಲಿ ಬೆಳಿಗ್ಗೆ 9:30 ಕ್ಕೆ ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಶಾಸಕರಾದ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದು, ಈದು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರೇವಣ್ಣ ರೇವಣ್ಣವರ್, ಪ್ರಾಧ್ಯಾಪಕರು (ಕೀಟಶಾಸ್ತ್ರ), ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಡಾ. ಚೈತನ್ಯ ಎಚ್.ಎಸ್, ಸಹಾಯಕ ಪ್ರಾಧ್ಯಾಪಕರು (ತೋಟಗಾರಿಕೆ), ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ರವರು, ಡಾ. ಸಂಜೀವ ಜಕಾತಿಮಠ, ಮುಖ್ಯಸ್ಥರು ಮತ್ತು ಸಹಾಯಕ ಪ್ರಾಧ್ಯಾಪಕರು (ಸಸ್ಯರೋಗ ಶಾಸ್ತ್ರ), ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಶೃಂಗೇರಿ, ಪ್ರವೀಣ್ ಕೆ.ಎಂ., ತಾಂತ್ರಿಕ ಅಧಿಕಾರಿಗಳು, ಜಿ.ಕೆ.ಎಂ.ಎಸ್, ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ರವರು ಭಾಗವಹಿಸಲಿದ್ದು, ರೈತರು ಕಾರ್ಯಕ್ರಮದ ಪ್ರಯೋಜನ ಪಡೆಯಬೇಕಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶ್ರೀನಿವಾಸ ಬಿ.ವಿ ತಿಳಿಸಿದ್ದಾರೆ.

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *