
ಕಾರ್ಕಳ, ಜೂ19 : ಜೂ.23 ರಂದು 33ಕೆವಿ ಸ್ಟೇಶನ್ ಗೆ ಸಂಬಂಧಿಸಿದ ಸ್ಟ್ರಕ್ಟರ್ ಚೇಂಜ್ ಹಾಗೂ 11ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಅಂದು 220/110/11 ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಫೀಡರ್ ಗಳಾದ ಕಾರ್ಕಳ ಐಬಿ, ಕಾರ್ಕಳ ಎಕ್ಸ್ ಪ್ರೆಸ್, ಮಿಯ್ಯಾರು, ಇರ್ವತ್ತೂರು ಫೀಡರ್, 110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಮುಂಡೂರು ಫೀಡರ್, 110/11 ಕೆವಿ ಕಾರ್ಕಳ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಜಾರ್ಕಳ, ಹಿರ್ಗಾನ, ನೆಲ್ಲಿಕಟ್ಟೆ, ಕೆಎಚ್ ಬಿ, ನಕ್ರೆ, ಪದವು ಮತ್ತು 33/11 ಕೆವಿ ಬಜಗೋಳಿ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕರ್ಮಾರ್ ಕಟ್ಟೆ, ಚೌಕಿ ನೆಲ್ಲಿಕಾರು, ಹೊಸ್ಮಾರು ಎಕ್ಸ್ ಪ್ರೆಸ್, ಮಲ್ಲಾರು, ಬಜಗೋಳಿ ಟೌನ್ ಮತ್ತು ಕೆರ್ವಾಶೆ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಅಂದು ಬೆಳಿಗ್ಗೆ 9 ಘಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳಿಸಲಾಗುವುದು.
ಆದ್ದರಿಂದ ಕಾರ್ಕಳ ತಾಲೂಕಿನ ಮಿಯ್ಯಾರು, ಕುಂಟಿಬೈಲು, ರೆಂಜಾಳ, ರಾಮೇರಗುತ್ತು, ಬೋರ್ಕಟ್ಟೆ, ಕಳತ್ರಪಾದೆ, ಬೈಪಾಸ್, ಮುರತ್ತಂಗಡಿ, ಇರ್ವತ್ತೂರು, ಮುಂಡ್ಕೂರು, ಮುಲ್ಲಡ್ಕ, ಕೊಡಿಮಾರ್, ನಾನಿಲ್ ತಾರ್, ಜಾರಿಗೆಕಟ್ಟೆ, ಸಂಕಲಕರಿಯ, ಸಚ್ಚರಿಪೇಟೆ, ಕುಂಟಲ್ ಪಾಡಿ, ಕೋರ್ಟ್ ರೋಡ್, ಜೋಗಲ್ ಬೆಟ್ಟು, ಆನೆಕೆರೆ, ಕಾಳಿಕಾಂಬ ಪ್ರದೇಶಗಳು, ಕುಕ್ಕುಂದೂರು, ಅಯ್ಯಪ್ಪನಗರ, ಮಂಗಳಕಲ್ಲು, ಪಿಲಿಚಂಡಿ ಸ್ಥಾನ, ಗಣಿತನಗರ, ಜಾರ್ಕಳ, ಬೈಲೂರು, ನೀರೆ, ಕೌಡೂರು, ಹಿರ್ಗಾನ, ಕಾನಂಗಿ ರಸ್ತೆ, ಕುಂದೇಶ್ವರ, ಚಿಕ್ಕಲ್ ಬೆಟ್ಟು,ಮಂಗಿಲಾರು, ನೆಲ್ಲಿಕಟ್ಟೆ, ಕಾಂತರಗೋಳಿ, ಎರ್ಲಪಾಡಿ, ಗೋವಿಂದೂರು, ಕೆಎಚ್ ಬಿ ಕಾಲೋನಿ, ಜೋಡುರಸ್ತೆ, ಗುಂಡ್ಯಡ್ಕ, ಕುಂಟಾಡಿ, ಪೊಸನೊಟ್ಟು, ನಕ್ರೆ, ಪರಪು, ಬೋರ್ಗಲ್ ಗುಡ್ಡೆ, ಪದವು, ಪಳ್ಳಿ, ಆನಂದಿಮೈದಾನ, ಬಜಗೋಳಿ, ಕೆರ್ವಾಶ, ಮುಡ್ರಾಲು, ಕಡಾರಿ, ಮುಲ್ಲೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಚೆಂಡೆ ಬಸದಿ, ಪುಚ್ಚಬೆಟ್ಟು, ಜ್ಯೋತಿನಗರ, ಪೇರಿ, ಪೆರ್ನೋಡಿ, ಹೊಸ್ಮಾರು, ಈದು, ನಲ್ಲೂರು, ನೆಲ್ಲಿಗುಡ್ಡೆ, ನೂರಾಳ್ ಬೆಟ್ಟು ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಇದನ್ನು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
