ಕಾರ್ಕಳ: ಬದುಕಿನ ಮಹತ್ತರವಾದ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಪದವಿಯ ಶಿಕ್ಷಣ ಬಹಳ ಸೂಕ್ತವಾದುದು.ಈ ಸಂದರ್ಭದಲ್ಲಿ ವಿದ್ಯಾಥಿಗಳು ಬಹಳಷ್ಟು ಕ್ರಿಯಾಶೀಲವಾಗಿರಬೇಕಾದ ಅಗತ್ಯವಿದೆ. ಕನಸಿನ ಜೊತೆಗೆ ಕಲಿಕೆಯ ಶ್ರಮವೂ ಇದ್ದಾಗ ವಿದ್ಯಾರ್ಥಿಗಳ ಬೆಳವಣಿಗೆ ಆಗುತ್ತದೆ. ಅಂಕಗಳು ಹೇಗೆ ಮುಖ್ಯವೋ, ಉಳಿದ ಚಟುವಟಿಕೆಗಳು ಕೂಡಾ ಅಷ್ಟೇ ಮಹತ್ವದ್ದು ಅನ್ನುವ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ ಎ ಶಿವಾನಂದ ಪೈ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ ಓರಿಯಂಟೇಷನ್ ಕಾರ್ಯಕ್ರಮವನ್ನು ಉದ್ಫಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಶೈಕ್ಷಣಿಕ ಹಾಗೂ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಬೇಕು. ನಿಮ್ಮ ಆಯ್ಕೆಯ ಬಗ್ಗೆ ಯಾವತ್ತೂ ನಿಮ್ಮಲ್ಲಿ ಗೌರವವಿರಬೇಕು. ಮಾನಸಿಕ ಬದಲಾವಣೆ ಈ ಶೈಕ್ಷಣಿಕ ಹಂತದಲ್ಲೇ ನಡೆಯಬೇಕು.ಪೂರ್ವ ತಯಾರಿ ಮತ್ತು ಕಠಿಣ ಶ್ರದ್ಧೆ ಮಾತ್ರ ನಿಮ್ಮನ್ನು ಮುಂದೆ ಬರುವಂತೆ ಮಾಡುತ್ತದೆ. ನಮ್ಮ ಕಾಲೇಜಿನ ಎಲ್ಲ ಸವಲತ್ತುಗಳನ್ನು ಬಳಸಿಕೊಂಡು ಬೆಳೆಯವುದು ಅತ್ಯಗತ್ಯ ಎಂದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯುಎಸಿ ನಿರ್ದೇಶಕರಾದ ಪ್ರೊ.ನಾಗಭೂಷಣ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸೌರಭ ಪಾಠಕ್ ಪ್ರಾರ್ಥಿಸಿ, ಆಂಗ್ಲ ವಿಭಾಗದ ಶ್ರಿಮತಿ ಶೃಂಗ ಸ್ವಾಗತಿಸಿದರು. ಕುಮಾರಿ ಪದ್ಮಶ್ರೀ ಕಾರ್ಯಕ್ರಮ ನಿರೂಪಿಸಿರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ ವಂದಿಸಿದರು.
`