ಧರ್ಮಸ್ಥಳ ಅಸ್ಥಿಪಂಜರ ಪ್ರಕರಣದಲ್ಲಿ ಶೀಘ್ರವೇ ಸತ್ಯಾಸತ್ಯತೆ ಹೊರಬಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು, ಆ,19(ವಿಧಾನಸೌಧ): ಧರ್ಮಸ್ಥಳದ ಹೆಸರಿಗೆ ಕಳಂಕ ಬರಬಾರದು ಎಂಬ ಕಾರಣಕ್ಕೆ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ.ಈ ಕುರಿತು ಶೀಘ್ರವೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಅವರು ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ…
ಅಧಿವೇಶನ ಮುಗಿದ ನಂತರ ಅನರ್ಹ ಪಡಿತರ ಚೀಟಿ ರದ್ದತಿಗೆ ಕ್ರಮ: ಸಚಿವ ಕೆ.ಎಚ್ ಮುನಿಯಪ್ಪ
ವಿಧಾನ ಪರಿಷತ್ (ಆ.19): ಅಧಿವೇಶನ ಮುಗಿದ ನಂತರ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರನ್ನು ಪತ್ತೆ ಮಾಡಿ ಎಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು, ಅನರ್ಹ ಪಡಿತರ ಚೀಟಿ ರದ್ದತಿ ನಂತರ ಹೊಸ ಪಡಿತರ ಚೀಟಿ ನೀಡಲಾಗುವುದು ಎಂದು ಆಹಾರ ಮತ್ತು…
ಭಾರೀ ಮಳೆ ಹಿನ್ನೆಲೆಯಲ್ಲಿ ಇಂದೂ ಕೂಡ ಮಂಗಳವಾರ (ಆ.19) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ITI ತರಗತಿಗಳಿಗೆ ರಜೆ
ಉಡುಪಿ, ಆ,19: ಕರಾವಳಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಇಂದೂ ಕೂಡ ಮಂಗಳವಾರ (ಆ.19) ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪಿಯುಸಿ ಹಾಗೂ ITI ತರಗತಿಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ.ಟಿ.ಕೆ ಆದೇಶಿಸಿದ್ದಾರೆ.
ಉಡುಪಿ:ವಿದ್ಯಾರ್ಥಿ ವೇತನ ವಿತರಣೆ, ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ: ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು : ಸಿ.ಎ. ಕಾರ್ಕಳ ಕಮಲಾಕ್ಷ ಕಾಮತ್
ಉಡುಪಿ: ಸೇವೆಯ ಮೂಲಕ ಜೀವನದ ಸಾಫಲ್ಯತೆಯನ್ನು ಕಾಣಬೇಕು. ರಾಮನ ನಡೆ ಕೃಷ್ಣನ ನುಡಿ ನಮ್ಮದಾಗಬೇಕು. ವಿದ್ಯಾರ್ಥಿಗಳು ಕಷ್ಟದ ಸಂದರ್ಭದಲ್ಲಿ ಕೈಹಿಡಿದ ಸಮಾಜದ ಋಣವನ್ನು, ಮುಂದೆ ವಿದ್ಯಾಭ್ಯಾಸದಲ್ಲಿ ಶ್ರೇಷ್ಠತೆಯ ಸಾಧನೆಗೈದು ಉದ್ಯೋಗ ಅಥವಾ ಉದ್ಯಮದ ಮೂಲಕ ಸಮಾಜಕ್ಕೆ ಹಿಂದುರುಗಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು…
ಕೇಂದ್ರ ಸರಕಾರದ ಹಿಂದಿ ಸಲಹಾ ಸಮಿತಿಗೆ ನಿಟ್ಟೆ ಕಾಲೇಜಿನ ಡಾ| ದಯಾನಂದ ಎನ್ ಬಾಯಾರ್ ನೇಮಕ
ಕಾರ್ಕಳ: ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಂದಾಯ, ವೆಚ್ಚ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ಇಲಾಖೆಗಳ ಅಧಿಕೃತ ಭಾಷಾ ಸಮಿತಿಯ ಹಿಂದಿ ಸಲಹಾ ಸಮಿತಿಗೆ ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ…
ಕಾರ್ಕಳ: ಯುವ ಕಾಂಗ್ರೆಸ್ ಸಮಿತಿಯಿಂದ ‘ನಮ್ಮ ಮತ-ನಮ್ಮ ಹಕ್ಕು-ನಮ್ಮ ಹೋರಾಟ’ ಸ್ಟಿಕ್ಕರ್ ಅಭಿಯಾನ
ಕಾರ್ಕಳ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆದೇಶದಂತೆ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಹಿನ್ನಲೆ ಇಂದು ಯುವ ಕಾಂಗ್ರೇಸ್ ಸಮಿತಿಯ ನೇತೃತ್ವದಲ್ಲಿ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ‘ನಮ್ಮ ಮತ-ನಮ್ಮ ಹಕ್ಕು-ನಮ್ಮ ಹೋರಾಟ’ ಸ್ಟಿಕ್ಕರ್ ಅಭಿಯಾನ ನಡೆಯಿತು.…
ಧರ್ಮಸ್ಥಳ ಬುರುಡೆ ಪ್ರಕರಣ:FSL ವರದಿ ಬರುವ ತನಕ ಧರ್ಮಸ್ಥಳದಲ್ಲಿ ಉತ್ಖನನ ತಾತ್ಕಾಲಿಕವಾಗಿ ಸ್ಥಗಿತ: ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಹಿತಿ
ಬೆಂಗಳೂರು,ಆ.18: ಧರ್ಮಸ್ಥಳದ ಬುರುಡೆ ಪ್ರಕರಣದ ಕುರಿತು ರಾಜಕೀಯ ತಿಕ್ಕಾಟ ಜೋರಾಗಿದ್ದು, ಈ ನಡುವೆ ಗೃಹ ಸಚಿವ ಪರಮೇಶ್ವರ್, FSL ವರದಿ ಬರುವ ತನಕ ಉತ್ಖನನ ಸ್ಥಗಿತಗೊಳಿಸಲಾಗಿದೆ ಎಂದು ಸದನದಲ್ಲಿ ಉತ್ತರಿಸಿದ್ದಾರೆ. ಪ್ರತಿಪಕ್ಷ ಬಿಜೆಪಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಅಪರಿಚಿತ ಸಾಕ್ಷಿದಾರ ವ್ಯಕ್ತಿಗೆ…
ಅಜೆಕಾರು : ಸ್ವಯಂಪ್ರೇರಿತ ರಕ್ತದಾನ ಶಿಬಿರ
ಕಾರ್ಕಳ : ಶಾಸಕ ವಿ ಸುನೀಲ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಶಕ್ತಿ ಕೇಂದ್ರ ಮರ್ಣೆ- ಅಜೆಕಾರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ಆ.…
ಸಿಎಂ ಸಿದ್ಧರಾಮಯ್ಯ ವಿರುದ್ಧ ಕೊಲೆ ಆರೋಪ : ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಿಸಲು ಗೃಹ ಸಚಿವ ಪರಮೇಶ್ವರ್ ಸೂಚನೆ
ಬೆಂಗಳೂರು, ಆ,18 : ಸೌಜನ್ಯ ಪರ ನ್ಯಾಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಕಳೆದ 2023ರಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಡಿರುವ ಕೊಲೆ ಆರೋಪದ ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ತಿಮರೋಡಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್…
ಅಜೆಕಾರಿನಲ್ಲಿ ಬಾಲಾಜಿ ಬೇಕರಿ & ಕ್ರೀಂ ಪಾರ್ಲರ್ ಶುಭಾರಂಭ: ದುಡಿಮೆಗೆ ತಕ್ಕ ಪ್ರತಿಫಲ ದೇವರು ಕೊಟ್ಟೇ ಕೊಡುತ್ತಾನೆ: ಮುಂಬಯಿ ಉದ್ಯಮಿ ಶಿವರಾಮ ಶೆಟ್ಟಿ
ಅಜೆಕಾರು,ಆ,16:ನಾವು ಮಾಡುವ ಯಾವುದೇ ಕೆಲಸಕಾರ್ಯಗಳಾಗಲಿ ಅತ್ಯಂತ ಶ್ರದ್ಧೆ, ನಿಷ್ಠೆಯಿಂದ ಮಾಡಬೇಕು. ಭಗವಂತನ ಮೇಲೆ ನಂಬಿಕೆಯಿಟ್ಟು ಮಾಡುವ ದುಡಿಮೆಗೆ ತಕ್ಕ ಪ್ರತಿಫಲ ಖಂಡಿತವಾಗಿ ಸಿಗುತ್ತದೆ ಎಂದು ಮುಂಬಯಿಉದ್ಯಮಿ ಶಿವರಾಮ ಜಿ ಶೆಟ್ಟಿ ಹೇಳಿದರು. ಅವರು ಭಾನುವಾರ ಅಜೆಕಾರಿನ ಅಜೆಕಾರ್ ಕಾಂಪ್ಲೆಕ್ಸ್ ನಲ್ಲಿ ನೂತನ…
