ಕಾಂತಾವರ ಮಹಾವೀರ ಪಾಂಡಿಯವರಿಗೆ ಶ್ರೀಧರಪಾಂಡಿ ಸಂಸ್ಮರಣಾ  ಪ್ರಶಸ್ತಿ 

ಕಾರ್ಕಳ: ತನ್ನ ಶೈಕ್ಷಣಿಕ ಹಂತದಿಂದ ಯಕ್ಷಗಾನ ಕಲೆಯ ಅಪಾರ ಆಸಕ್ತಿ ಹೊಂದಿ ಅಗ್ರಮಾನ್ಯ ಕಲಾವಿದರಿಂದ ನಾಟ್ಯಭ್ಯಾಸಗೈದು ವೇಷದಾರಿಯಾಗಿ ಮೆರೆದು ಜೊತೆಗೆ ಉತ್ತಮ ಪ್ರಸಂಗಕರ್ತರಾದ ಜೈನ ಕವಿ ಸಾಣೂರು ಶ್ರೀಧರ ಪಾಂಡಿಯವರ ಹದಿಮೂರನೇ “ಸಾವಿರದ ನೆನಪು” ಸಮಾರಂಭದಲ್ಲಿ ಯಕ್ಷಗಾನದ ಹಿರಿಯ ಕಲಾವಿದ ನಾಟ್ಯ…

ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ: ನಾಳೆ (ನ. 20)ರಾಜ್ಯಾದ್ಯಂತ ‘ಮದ್ಯ’ ಮಾರಾಟ ಬಂದ್!

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸ್ವಚ್ಛ ಅಬಕಾರಿ ಅಭಿಯಾನದಡಿ ನಾಳೆ (ನ. 20) ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್‌ ಅಸೋಸಿಯೇಶನ್ ಕರ್ನಾಟಕ ಕರೆ ನೀಡಿದೆ.…

ಹೆಬ್ರಿಯ ಕಬ್ಬಿನಾಲೆಯಲ್ಲಿ‌ ತಡರಾತ್ರಿ ನಕ್ಸಲರ ವಿರುದ್ಧ ಕಾರ್ಯಾಚರಣೆ: ಎನ್’ಕೌಂಟರ್ ಗೆ ಮೋಸ್ಟ್ ವಾಂಟೆಡ್‌ ನಕ್ಸಲ್ ಮುಖಂಡ ವಿಕ್ರಮ್ ಗೌಡ ಬಲಿ?

ಕಾರ್ಕಳ: ಹೆಬ್ರಿ ತಾಲೂಕಿನ ಕಬ್ಬಿನಾಲೆಯ ತಿಂಗಳೆಮಕ್ಕಿ ಪೀತ್’ಬೈಲು ಎಂಬಲ್ಲಿನ ದಟ್ಟಕಾಡಿನಲ್ಲಿ ಸೋಮವಾರ ತಡರಾತ್ರಿ ANF ಪೊಲೀಸರು ಹೊಂಚುಹಾಕಿ ಓರ್ವ ನಕ್ಸಲ್ ಮುಖಂಡನನ್ನು ಹೊಡೆದುರುಳಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಎನ್’ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ…

ಪಡುಬಿದ್ರಿ: ಟಯರ್ ಬ್ಲಾಸ್ಟ್ ಆಗಿ ಗೂಡ್ಸ್ ಟೆಂಪೊ ಪಲ್ಟಿ: ಮೂವರಿಗೆ ಗಾಯ

ಪಡುಬಿದ್ರಿ: ಗೂಡ್ಸ್ ವಾಹನವೊಂದು ಟಯರ್ ಬ್ಲಾಸ್ಟ್ ಆದ ಪರಿಣಾಮ ಪಲ್ಟಿಯಾಗಿದ ಘಟನೆ ಪಡುಬಿದ್ರಿ ಯಲ್ಲಿ ನಡೆದಿದೆ. ಅಪಘಾತದಿಂದ ಅದರಲ್ಲಿದ್ದ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾವೂರಿನಿಂದ ಕಟಪಾಡಿಗೆ ಸೆಂಟ್ರಿಗ್ ಪರಿಕರಗಳನ್ನು ಸಾಗಿಸುತ್ತಿದ್ದ ಗೂಡ್ಸ್ ವಾಹನದ ಹಳೆ ಟಯರ್ ಬ್ಲಾಸ್ಟ್…

ಹೆರ್ಮುಂಡೆ: “ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – 2” ಪುಸ್ತಕ ಬಿಡುಗಡೆ

ಕಾರ್ಕಳ: ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಗ್ರಾಮ ಪಂಚಾಯತ್ ಮರ್ಣೆ ಹಾಗೂ ವಿವಿಧ ಸಂಘಸAಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತಾಭಿಯಾನ ಮಾಸಾಚರಣೆ – 2024ರ “ಸ್ವಚ್ಛ ಸಂಭ್ರಮ ಮತ್ತು ಬೆಸುಗೆ ಆವೃತ್ತಿ – 2” ಪುಸ್ತಕ ಬಿಡುಗಡೆ ಸಮಾರಂಭವು ನ.17 ರಂದು ಭಾನುವಾರ…

ಈದು-ನಾರಾವಿ: ಮಹಾ ಚಂಡಿಕಾ ಯಾಗದ ಮಾಹಿತಿ ಕಚೇರಿ ಉದ್ಘಾಟನೆ

ನಾರಾವಿ: ಡಿ.22 ನಾರಾವಿಯ ಸೂರ್ಯನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಮಹಾ ಚಂಡಿಕಾ ಯಾಗವು ನಡೆಯಲಿದ್ದು, ಇದರ ಮಾಹಿತಿ ಕೇಂದ್ರದ ಉದ್ಘಾಟನೆಯು ಭಾನುವಾರ ನಡೆಯಿತು. ಜಗನ್ಮಾತೆ ಶ್ರೀದೇವಿಯು ಸ್ತ್ರೀ ಶಕ್ತಿಯ ಪರಿಚಯವನ್ನು ಸಮಸ್ತ ಬ್ರಹ್ಮಾಂಡಕ್ಕೆ ಪರಿಚಯಿಸಿ, ಮಹಿಷಾಸುರ ವಧೆಯ ಮೂಲಕ ಲೋಕಕ್ಕೆ ಸ್ತ್ರೀ…

ಕಾಂಗ್ರೆಸ್ ಮುಖಂಡ ಡಿ.ಆರ್.ರಾಜು ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಾಪ

ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಉಪಾಧ್ಯಕ್ಷರು ಹಾಗೂ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರಾಗಿದ್ದ ಡಿ.ಆರ್.ರಾಜು ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್…

ಕಾರ್ಕಳ ಪುರಸಭೆ ಸದಸ್ಯನಿಂದ ಗೂಂಡಾ ವರ್ತನೆ: ವ್ಯಕ್ತಿಗೆ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಕಾರ್ಕಳ: ಪುರಸಭಾ ಸದಸ್ಯನೋರ್ವ ವ್ಯಕ್ತಿಯೊಬ್ಬರ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಹಲ್ಲೆಗೈದ ಘಟನೆ ಕಾರ್ಕಳದಲ್ಲಿ ಭಾನುವಾರ ನಡೆದಿದೆ. ಈ ಹಲ್ಲೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾರ್ಕಳ ಪುರಸಭೆಯ ಕಾಂಗ್ರೆಸ್ ಸದಸ್ಯ ಸೀತಾರಾಮ ಎಂಬವರು ಬಂಡೀಮಠದಲ್ಲಿನ ನಂದಿನಿ ಹಾಲಿನ ಬೂತ್ ಬಳಿ…

ಬಂಟ್ವಾಳ:  ಕೆದಿಲದಲ್ಲಿ ಸಿಡಿಲು ಬಡಿದು ಬಾಲಕ ಮೃತ್ಯು

ಬಂಟ್ವಾಳ: ಕೆದಿಲ ಗ್ರಾಮದಲ್ಲಿ ರವಿವಾರ ಮಿಂಚು-ಸಿಡಿಲಿನ ತೀವ್ರತೆಯ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮನೆಯ ಸಿಟೌಟ್‌ನಲ್ಲಿದ್ದ ಬಾಲಕನಿಗೆ ಏಕಾಏಕಿ ಸಿಡಿಲು ಬಡಿದಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಕೆದಿಲ ಗ್ರಾಮದ ಪೇರಮೊಗ್ರು ಸಮೀಪದ ಮುರಿಯಾಜೆ…

ಕಾಂಗ್ರೆಸ್ ಹಿರಿಯ ಮುಖಂಡ,ಬಿಲ್ಲವ ಸಮಾಜದ ಮುಂದಾಳು ಡಿ.ಆರ್ ರಾಜು ನಿಧನಕ್ಕೆ ಶಾಸಕ ಸುನಿಲ್ ಕುಮಾರ್ ತೀವ್ರ ಸಂತಾಪ

ಕಾರ್ಕಳ : ಕಾಂಗ್ರೆಸ್ ಹಿರಿಯ ಮುಖಂಡ,ಬಿಲ್ಲವ ಸಮಾಜದ ಮುಂದಾಳು ಡಿ.ಆರ್ ರಾಜು ನಿಧನಕ್ಕೆ ಶಾಸಕ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ. ನೇರ ನಡೆ–ನುಡಿಯ, ಸರಳ ಸಜ್ಜನಿಕೆಯ ವ್ಯಕ್ತಿ, ಅಜಾತಶತ್ರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷರು, ಕಾರ್ಕಳ…