ಮಂಗಳೂರು: 5 ಸಾವಿರ ಲಂಚ ಸ್ವೀಕರಿಸುವಾಗಲೇ ಬಜ್ಪೆ ಇನ್ಸ್ಪೆಕ್ಟರ್ ಬಾಲಕೃಷ್ಣ ಲೋಕಾಯುಕ್ತ ಬಲೆಗೆ
ಮಂಗಳೂರು,ಸೆ.21: ವಂಚನೆ ಪ್ರಕರಣವೊಂದರಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಬಜ್ಪೆ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಅವರನ್ನು ಲಂಚ ಸ್ವೀಕರಿಸುವಾಗಲೇ ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಾಕಿ ಉಳಿದಿದ್ದ ಸಾವಿರ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು…
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆಗೆ ಒಪ್ಪಿದ ಸುಪ್ರೀಂಕೋರ್ಟ್: 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸೂಚನೆ
ನವದೆಹಲಿ,ಸೆ.21: ಕಳೆದ 2012ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣದ ಕುರಿತು ಮಹತ್ವದ ಬೆಳವಣಿಗೆ ನಡೆದಿದ್ದು,ಈ ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಒಪ್ಪಿದ ಸುಪ್ರೀಂಕೋರ್ಟ್…
ಸೆ. 28 ರಿಂದ ಮೂರು ದಿನ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ: ಪಿಂಚಣಿ, 5 ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳಿಗೆ ಯೂನಿಯನ್ ಪಟ್ಟು
ನವದೆಹಲಿ, ಸೆ.21: ಸೆಪ್ಟೆಂಬರ್ 28 ರಿಂದ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಏಳು ಯೂನಿಯನ್‌ಗಳ ಒಕ್ಕೂಟವಾದ ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್’ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸವಾಲುಗಳನ್ನು…
ಸ್ವಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ರಾಜೀನಾಮೆ ಬೆದರಿಕೆ: ಸರ್ಕಾರದ ರೈತ ವಿರೋಧಿ ನೀತಿಗೆ ಸಾಕ್ಷಿ: X ನಲ್ಲಿ ಸುನಿಲ್ ಕುಮಾರ್ ವಾಗ್ದಾಳಿ
ಕಾರ್ಕಳ, ಸೆ.21: ರೈತರ ಹಿತವನ್ನು ಮರೆತ ಸೊಕ್ಕಿನ ಸರ್ಕಾರಕ್ಕೆ ಸ್ವಪಕ್ಷದ ಶಾಸಕರೇ ತಿರುಗಿಬಿದ್ದಿದ್ದು ಸರ್ಕಾರದ ವೈಫಲ್ಯತೆಗೆ ಹಿಡಿದ ಕೈನ್ನಡಿಯಾಗಿದೆ. ಒಬ್ಬ ಹಿರಿಯ ಶಾಸಕ ಹಾಗೂ ಮಾಜಿ ಸಚಿವರೊಬ್ಬರು ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡದೇ ಇದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಗಡುವು ನೀಡುತ್ತಿರುವುದು…
ಕಾರ್ಕಳ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯ ಮತ್ತೊಂದು ಮಹತ್ವದ ಮೈಲಿಗಲ್ಲು: ಅಪರೂಪದ ಲ್ಯಾಪ್ರೋಸ್ಕೋಪಿಕ್ ಟ್ರಾನ್ಸ್ ಅಬ್ಡೊಮಿನಲ್ ಪ್ರೀಪೆರಿಟೋನಿಯಲ್ ಯಶಸ್ವಿ ಶಸ್ತ್ರಚಿಕಿತ್ಸೆ
ಕಾರ್ಕಳ,ಸೆ.20: ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಸ್ಥಳೀಯವಾಗಿಯೇ ಜನರಿಗೆ ಒದಗಿಸುವ ನಿಟ್ಟಿನಲ್ಲಿ ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಆಸ್ಪತ್ರೆಯಲ್ಲಿ 45 ವರ್ಷದ ರೋಗಿಗೆ ಲ್ಯಾಪರೊಸ್ಕೋಪಿಕ್ ಟ್ರಾನ್ಸ್ಅಬ್ಡೊಮಿನಲ್ ಪ್ರೀಪೆರಿಟೋನಿಯಲ್ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸಕರಾದ…
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆ :2006-07ನೇ ಸಾಲಿನ ನೇಮಕಾತಿಯಾದ ಶಿಕ್ಷಕರಿಗೆ ಅನ್ವಯ: ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ
ಬೆಂಗಳೂರು,ಸೆ.20: 2006ರ ಏಪ್ರಿಲ್ 1ಕ್ಕೂ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದ ಹುದ್ದೆಗಳ 3,773 ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ (OPS) ಸೇರ್ಪಡೆಗೊಳಿಸಲು ಕರ್ನಾಟಕ ಶಿಕ್ಷಣ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ . ಬೆಂಗಳೂರು,…
ಕಾರ್ಕಳ ಸಾಣೂರು ರಾಮ ಮಂದಿರ ಬಳಿ ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿ: ಭೀಕರ ಅಪಘಾತದಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಚಾಲಕನಿಗೆ ಗಾಯ
ಕಾರ್ಕಳ, ಸೆ.20: ಮಾಜಿ ಸಚಿವ ಬಿ. ರಮಾನಾಥ ರೈಯವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಎಕ್ಸ್‌ಪ್ರೆಸ್ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಮಾನಾಥ ರೈ ಹಾಗೂ ಅವರ ಕಾರು ಚಾಲಕ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಕಾರ್ಕಳ ರಾಷ್ಠ್ರೀಯ ಹೆದ್ದಾರಿ169ರ…
ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು: ಚಾಲಕ ಹಾಗೂ 3 ವರ್ಷದ ಮಗುವಿನ ರಕ್ಷಣೆ
ಉಡುಪಿ,ಸೆ.20: ಕೊಡವೂರು ಚೆನ್ನಂಗಡಿ ಸಮೀಪ ನದಿಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆರ ಬಿದ್ದು ದುರಂತ ಸಂಭವಿಸಿದೆ. ಅಪಘಾತ ನಡೆದ ತಕ್ಷಣವೇ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಮೀನುಗಾರರೊಬ್ಬರು ಸಾಹಸದಿಂದ ರಕ್ಷಿಸಿದ ಘಟನೆ ಭಾನುವಾರ ಮುಂಜಾನೆ ನಡೆದಿದೆ. ಕಾರು ನದಿಗೆ…
ಮಾಳ ಗುರುಕುಲ ಶಾಲೆಯಲ್ಲಿ 19ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ್ ಕಾರ್ಯಕ್ರಮ- 2026
ಕಾರ್ಕಳ,ಸೆ.20:ವಿದ್ಯಾಭಾರತಿ ಉಡುಪಿ ಜಿಲ್ಲೆ ಹಾಗೂ ಮಾಳ ಗುರುಕುಲ ವಿದ್ಯಾವರ್ಧಕ ಸಂಘದ ವತಿಯಿಂದ 19ನೇ ಜಿಲ್ಲಾ ಶೈಕ್ಷಣಿಕ ಸಹಮಿಲನ್ ಕಾರ್ಯಕ್ರಮ- 2026 ಕಾರ್ಯಕ್ರಮವು ಮಾಳ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ.19ರಂದು ಶನಿವಾರದಂದು ನಡೆಯಿತು. ಮೂಡುಬಿದಿರೆಯ ವೈಬ್ರೆಂಟ್ ಶಿಕ್ಷಣ ಸಂಸ್ಥೆಯ ಸ್ಥಾಪಕರಾದ…
ಹೆಬ್ರಿ ಅಮೃತಭಾರತಿ ವಿದ್ಯಾಲಯದ ಶಿಕ್ಷಕ ಮಹೇಶ ಹೈಕಾಡಿಯವರಿಗೆ ಡಾ. ಶಿವರಾಮ ಕಾರಂತ ಉತ್ತಮ ಶಿಕ್ಷಕ ಪ್ರಶಸ್ತಿ
ಹೆಬ್ರಿ, ಸೆ.20: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಕನ್ನಡ ಬೋಧನಾ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಹೆಬ್ರಿಯ ಅಮೃತ ಭಾರತಿ ವಿದ್ಯಾಲಯದ ಕನ್ನಡ ಶಿಕ್ಷಕ ಚಾರದ ಮಹೇಶ ಹೈಕಾಡಿಯವರಿಗೆ ಈ ಬಾರಿಯ “ಡಾ. ಶಿವರಾಮ ಕಾರಂತ ಉತ್ತಮ ಶಿಕ್ಷಕ ಪ್ರಶಸ್ತಿ” ಲಭಿಸಿದೆ.ಅವರ…
