
ಕಾರ್ಕಳ,ಆ.10: ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿಟ್ಟೆ ನಿವಾಸಿ ಮೊಂಟ ಮೂಲ್ಯ(81ವ) ಅವರು ಮನೆಯಲ್ಲಿ ಭಾನುವಾರ (ಆ.9) ರಾತ್ರಿ ಎಂದಿನAತೆ ಊಟ ಮಾಡಿ ಮಲಗಿದ್ದವರು ಮರುದಿನ ಬೆಳಿಗ್ಗೆ ಮನೆಯಲ್ಲಿರಲಿಲ್ಲ. ಮನೆಯವರು ಅವರನ್ನು ಹುಡುಕಾಡಿದಾಗ ಮನೆಯಂಗಳದ ಬಾವಿಯ ಬಳಿ ಅವರ ಚಪ್ಪಲಿ ಮತ್ತು ಟಾರ್ಚ್ ಲೈಟ್ ಕಂಡುಬAದಿದ್ದು, ಅನುಮಾನದಿಂದ ಅಗ್ನಿಶಾಮಕ ದಳದವರನ್ನು ಕರೆಸಿ ಬಾವಿಯಲ್ಲಿ ಹುಡುಕಿದಾಗ ಅವರ ಮೃತದೇಹ ಪತ್ತೆಯಾಗಿದೆ.
ವಯೋ ಸಹಜ ಖಾಯಿಲೆಯಾದ ಬಿ.ಪಿ., ಶುಗರ್, ಮೂತ್ರ ಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೊಂಟ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆAದು ಶಂಕಿಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
