
ಕಾರ್ಕಳ,ಆ.10: ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮರ್ಣೆ ಗ್ರಾಮದ ಅಜೆಕಾರು ನಡಿಬೆಟ್ಟು ನಿವಾಸಿ ಮಂಜುನಾಥ(37) ಎಂಬವರು ಆ.9ರಂದು ಮನೆಯಿಂದ ಹೊರ ಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮಂಜುನಾಥ ತನ್ನ ಸಹೋದರ ವಿನಾಯಕ ಎಂಬವರ ಜೊತೆ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಬೆಳಗ್ಗೆ ತನ್ನ ತಾಯಿಯ ಬಳಿ, ಕೆಲಸ ಇದ್ದಲ್ಲಿ ಹೋಗುವುದಾಗಿ ಇಲ್ಲದಿದ್ದರೆ ಅಜೆಕಾರು ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೇ ನಾಪತ್ತೆಯಾಗಿದ್ದಾರೆ. ಇವರು ಪತ್ತೆಯಾದಲ್ಲಿ ಅಜೆಕಾರು ಪೊಲೀಸ್ ಠಾಣೆಯ ಮೊಬೈಲ್ ಸಂಖ್ಯೆ 9480805470/ 8296546595 ಸಂಪರ್ಕಿಸಲು ಕೋರಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
