
ಕಾರ್ಕಳ, ಆ.05: ಇತಿಹಾಸ ಪ್ರಸಿದ್ದ ಆದಿ ಆಲಡೆ ಕ್ಷೇತ್ರವಾಗಿರುವ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೈವಜ್ಞರ ನೇತೃತ್ವದಲ್ಲಿ ಪ್ರಾಯಶ್ಚಿತ ಪೂಜೆ ನೆರವೇರಿದೆ. ಅಲ್ಲದೇ ಈಗಾಗಲೇ ಜೀರ್ಣೋದ್ದಾರ ಸಮಿತಿಯನ್ನು ಕೂಡ ರಚಿಸಲಾಗಿದ್ದು, ಇದರ ಅಂಗವಾಗಿ ಮುಂಬಯಿಯ ಲಾಲ್ ಚೌಕ್ ನಲ್ಲಿರುವ ಹೊಟೇಲ್ ಶ್ರೀಕೃಷ್ಣ ಪ್ಯಾಲೇಸ್ ನಲ್ಲಿ ಆಗಸ್ಟ್ 9ರಂದು ಸಂಜೆ 3.30 ಗಂಟೆಗೆ ಪೂರ್ವಭಾವಿ ಸಭೆ ನಡೆಯಲಿದೆ ಎಂದು ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ನಂದಳಿಕೆ ಸುಹಾಸ್ ಹೆಗ್ಡೆ ಹೇಳಿದರು.
ಅವರು ಕಾರ್ಕಳದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ವಾರ್ಷಿಕ ಸಿರಿಜಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ನಂದಳಿಕೆ ಕ್ಷೇತ್ರದ ಜೀರ್ಣೋದ್ಧಾರದ ಸಂಕಲ್ಪ ಕೈಗೊಂಡಿದ್ದು, ಇದರ ಪ್ರಥಮ ಪೂರ್ವಭಾವಿ ಸಭೆಯನ್ನು ಮುಂಬಯಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ವ್ಯಾಪಾರ, ಉದ್ಯಮ ಹಾಗೂ ಉದ್ಯೋಗ ಮಾಡಿಕೊಂಡು ಮುಂಬಯಿಯಲ್ಲಿ ನೆಲೆಸಿರುವ ಸಾವಿರಾರು ಜನರನ್ನು ಸಂಪರ್ಕಿಸುವ ಸಲುವಾಗಿ ಪ್ರತ್ಯೇಕ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು, ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ವಿನಂತಿಸಿಕೊAಡರು.
ಸುಮಾರು 900 ವರ್ಷಗಳ ಇತಿಹಾಸವಿರುವ ಆದಿ ಆಲಡೆ ಕ್ಷೇತ್ರವಾಗಿರುವ ನಂದಳಿಕೆಯ ಸಿರಿಜಾತ್ರೆಗೆ ಚಿಕ್ಕಮಗಳೂರು, ಮಂಡ್ಯ, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಪುರಾತನ ಇತಿಹಾಸವಿರುವ ದೇವಸ್ಥಾದ ಜೀರ್ಣೋದ್ದಾರಕ್ಕೆ ಸಂಕಲ್ಪ ಮಾಡಿರುವ ಹಿನ್ನಲೆಯಲ್ಲಿ ಈ ಕಾರ್ಯವು ಸಾಂಗವಾಗಿ ನೆರವೇರಲು ಸಮಸ್ತ ಭಕ್ತಾಧಿಗಳ ಸಹಕಾರ ಅತ್ಯಗತ್ಯ ಎಂದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಕೃಷ್ಣ,ವೈ ಶೆಟ್ಟಿ, ಕಂಬಳದ ಕಾರ್ಯಾಧ್ಯಕ್ಷರಾಗಿ ಶ್ರೀಕಾಂತ್ ಭಟ್ ಸೇರಿದಂತೆ ಕ್ರೀಯಾಶೀಲ ಸಮಿತಿಯನ್ನು ರಚಿಸಲಾಗಿದೆ. ಆದ್ದರಿಂದ ಎಲ್ಲರೂ ಜೀರ್ಣೋದ್ದಾರ ಕಾರ್ಯಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಂಬಯಿ ಉದ್ಯಮಿ ಕೃಷ್ಣ, ವೈ ಶೆಟ್ಟಿ ಉಪಸ್ಥಿತರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
