
ಕಾರ್ಕಳ,ಆ.11: ಕಾರ್ಕಳದ ವ್ಯಕ್ತಿಯೊಬ್ಬರಿಗೆ ಫೇಸ್ಬುಕ್ ವೀಡಿಯೋದಲ್ಲಿ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ಕೊಡುವುದಾಗಿ ನಂಬಿಸಿ 32,68,000 ರೂ. ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲಕ್ಷ್ಮಣ್ ಎಂಬವರಿಗೆ ಕಳೆದ ಜುಲೈ.17 ರಂದು ಫೇಸ್ಬುಕ್ ನಲ್ಲಿ ಒಂದು ವಿಡೀಯೋ ಬಂದಿದ್ದು ಅದರಲ್ಲಿ JB ( Julius Baer VIP Group) ಮತ್ತು 5paisa ಆ್ಯಪ್ನಲ್ಲಿ ಹಣ ಹೂಡಿಕೆ ಮಾಡಿದರೆ ಡಬಲ್ ಲಾಭಾಂಶ ಕೊಡುವುದಾಗಿ ಇದ್ದು, ಅದರಲ್ಲಿದ್ದ ಲಿಂಕನ್ನು ಕ್ಲಿಕ್ ಮಾಡಿದಾಗ JB ( Julius Baer VIP Group) ಮತ್ತು 5paisa ಎಂಬ ವಾಟ್ಸ್ಪ್ ಗ್ರೂಪ್ಗೆ ಜಾಯಿನ್ ಆಗಿದ್ದಾರೆ. ಆ ವ್ಯಾಟ್ಸ್ಪ್ ಗ್ರೂಪ್ನಲ್ಲಿ ಅಪರಿಚಿತರು ಹೆಚ್ಚಿನ ಲಾಭಾಂಶ ಮಾಡುವ ಷೇರು ಮತ್ತು IPO ಗಳಲ್ಲಿ ಹೂಡಿಕೆ ಮಾಡಬೇಕು ಎಂದು ನಂಬಿಸಿದ್ದಾರೆ. ಅದರಂತೆ ಲಕ್ಷ್ಮಣ್ ಅವರು 17/07/2026 ರಿಂದ 04/08/2026 ರವರೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 32,68,000 ಹಣವನ್ನು ವರ್ಗಾಯಿಸಿದ್ದಾರೆ. ಆದರೆ ಈವರೆಗೆ ಅಪರಿಚಿತ ವ್ಯಕ್ತಿ ಹೂಡಿಕೆ ಮಾಡಿದ ಹಣವನ್ನಾಗಲೀ ಅಥವಾ ಲಾಭಾಂಶವನ್ನು ನೀಡದೇ ವಂಚನೆ ಎಸಗಿದ್ದಾರೆ ಎಂದು ಲಕ್ಷ್ಮಣ್ ದೂರು ನೀಡಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




.
.
.
.
.
.
.
.
.
.
.
.
.
.
.
.
.
.
.
.
