

ನವದೆಹಲಿ,ನ.11: ಹಿಂದೂ ಉತ್ತರಾಧಿಕಾರ ಕಾಯ್ದೆ-1956ರ ಅಡಿಯಲ್ಲಿ ತಾತನ ಆಸ್ತಿ ವಿಭಾಗವಾಗಿ ತಂದೆಯ ಪಾಲಿಗೆ ಬಂದ ನಂತರ, ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ವಿನಃ ಅವಿಭಕ್ತ ಕುಟುಂಬದ ಆಸ್ತಿಯಾಗಿ ಉಳಿಯುವುದಿಲ್ಲ. ಹೀಗಾಗಿ ಅಂತಹ ಆಸ್ತಿಯ ಮೇಲೆ ಮೊಮ್ಮಗನಿಗೆ ಹುಟ್ಟಿನಿಂದಲೇ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಾತನಿಂದ ತಂದೆಗೆ ವಿಭಾಗದ ಮೂಲಕ ಬಂದಿದ್ದ ಆಸ್ತಿಯನ್ನು ತಂದೆಯು ಬೇರೆಯವರಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ, ಆ ಆಸ್ತಿಯಲ್ಲಿ ತನಗೂ ಅರ್ಧ ಪಾಲು ಬರಬೇಕು ಎಂದು ಕೋರಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಆಗಸ್ಟಿನ್ ಜಾರ್ಜ್ ಮಸಿಹ್ ಮತ್ತು ಸುನಿತಾ ಅಗರ್ವಾಲ್ ಅವರಿದ್ದ ದ್ವಿಸದಸ್ಯ ಪೀಠ ವಜಾಗೊಳಿಸಿದೆ.
ನ್ಯಾಯಾಲಯದ ಈ ತೀರ್ಪಿನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ತಂದೆಯಿAದ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯನ್ನು ಉತ್ತರಾಧಿಕಾರವಾಗಿ ಪಡೆದ ತಕ್ಷಣ, ಆತನೇ ಆ ಆಸ್ತಿಯ ಸಂಪೂರ್ಣ ಮತ್ತು ಪರಮ ಮಾಲೀಕನಾಗುತ್ತಾನೆ. ಆತನ ಜೀವಿತಾವಧಿಯಲ್ಲಿ ಆ ಆಸ್ತಿಯ ಮೇಲೆ ಮುಂದಿನ ತಲೆಮಾರಿನವರು (ಮೊಮ್ಮಕ್ಕಳು) ನೇರವಾಗಿ ಯಾವುದೇ ಕಾನೂನುಬದ್ಧ ಹಕ್ಕು ಮಂಡಿಸಲು ಸಾಧ್ಯವಿಲ್ಲ. ತಂದೆಗೆ ಆಸ್ತಿ ಸೇರಿದ ಬಳಿಕ ಅದು ಆತನ ಪ್ರತ್ಯೇಕ ಸ್ವತ್ತಾಗಿ ಪರಿವರ್ತನೆಗೊಳ್ಳಲಿದ್ದು, ಅದರ ಮೇಲೆ ಮೊಮ್ಮಗನ ಹಕ್ಕನ್ನು ಕಾನೂನುಬದ್ಧವಾಗಿ ನಿರ್ಬಂಧಿಸಿದAತಾಗುತ್ತದೆ.
ತAದೆಯು ಆಸ್ತಿ ಮಾರಾಟ ಮಾಡಿದ್ದನ್ನು ಅಥವಾ 1994ರ ರಾಜಿ ತೀರ್ಪನ್ನು ಅರ್ಜಿದಾರರು ಪ್ರಶ್ನಿಸದೇ, ಕೇವಲ ಜನ್ಮಸಿದ್ಧ ಹಕ್ಕಿನ ಆಧಾರದ ಮೇಲೆ ಪಾಲು ಕೇಳಿರುವುದು ಕಾನೂನುಬದ್ಧವಾಗಿ ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿಹಿಡಿದು ಅರ್ಜಿಯನ್ನು ವಜಾಗೊಳಿಸಿದೆ.


































.
.
.
.
.
.
.
.
.
.
.
.
.
.
.
.
.
.
.
.
