ಮಧ್ಯಪ್ರಾಚ್ಯದ ಸಂಘರ್ಷದಿAದ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಉಲ್ಬಣ: ಭಾರತದಲ್ಲಿ ನವೀಕರಿಸಬಹುದಾದ ಇಂಧನ ಬಳಕೆಯ ಕ್ರಾಂತಿಗೆ ಇದು ಸುವರ್ಣಾವಕಾಶ
ಕರಾವಳಿನ್ಯೂಸ್ ಡೆಸ್ಕ್ ವಿಶೇಷ ವರದಿ ತೈಲ ಸಂಪದ್ಭರಿತ ಮಧ್ಯಪ್ರಾಚ್ಯದಲ್ಲಿ ಇದೀಗ ಇರಾನ್, ಇಸ್ರೇಲ್ ಹಾಗೂ ಅಮೇರಿಕಾ ನಡುವೆ ಯುದ್ಧ ತೀವ್ರಗೊಂಡಿದೆ. ಉಭಯ ದೇಶಗಳ ನಡುವಿನ ಸಂಘರ್ಷದಿAದಾಗಿ ಭಾರತ ಸೇರಿದಂತೆ ಜಾಗತಿಕವಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಿದ್ದು ಇದರಿಂದ ದರ ಹೆಚ್ಚಳವಾಗಿ…
ಉಡುಪಿಯ ಕಟಪಾಡಿ ಹೆದ್ದಾರಿಯಲ್ಲಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ಅನಾಹುತ
ಉಡುಪಿ, ಮಾ.16: ಚಾಲಕನ ನಿಯಂತ್ರಣ ತಪ್ಪಿ ಎಲ್‌ಪಿಜಿ ಗ್ಯಾಸ್ ಸಾಗಾಟದ ಟ್ಯಾಂಕರ್ ಪಲ್ಟಿಯಾದ ಘಟನೆ ಉಡುಪಿ ಕಟಪಾಡಿ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಕಾಪು ತಾಲೂಕಿನ ಕಟಪಾಡಿಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹೆದ್ದಾರಿಯಲ್ಲಿ ಸಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ಏಕಾಏಕಿ ಚಾಲಕನ ನಿಯಂತ್ರಣ…
ಹೆಬ್ರಿ ಗಿಲ್ಲಾಳಿ ಗೋಶಾಲೆಯ ಒಣಹುಲ್ಲು ದಾಸ್ತಾನು ಕಟ್ಟಡ ಉದ್ಘಾಟನೆ
ಹೆಬ್ರಿ,ಮಾ.15:ಸನಾತನ ಧರ್ಮದ ಸಂಸ್ಕೃತಿಯನ್ನು ಪಾಲಿಸುವ ನಮ್ಮ ನಾಡಿನಲ್ಲಿ ಗೋವುಗಳಿಗೆ ಪರಮ ಪವಿತ್ರ ಸ್ಥಾನವಿದೆ. ಗೋವುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಗೋಮಯದಲ್ಲಿ ಮಹಾಲಕ್ಷ್ಮಿಯ ಸನ್ನಿಧಾನವಿದೆ. ಗೋಮಯವನ್ನು ಸಾರಿಸಿ ಆ ನೆಲದಲ್ಲಿ ನೈವೇದ್ಯವನ್ನು ಇಟ್ಟು ದೇವರಿಗೆ ಸಮರ್ಪಿಸಿದರೆ ದೇವರು ಸಂತುಷ್ಟಗೊಳ್ಳುತ್ತಾನೆ. ಗೋವುಗಳ ಪಾಲನೆಗೆ…
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ವತಿಯಿಂದ ಕಾರ್ಕಳದ ಹಲವೆಡೆ ಬೃಹತ್ ಪ್ರತಿಭಟನೆ
ಕಾರ್ಕಳ, ಮಾ.14:ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಕರಾವಳಿ ಭಾಗದ ನಿರ್ಲಕ್ಷ್ಯವನ್ನು ಖಂಡಿಸಿ, ಶಾಸಕ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಬಜಗೋಳಿಯಲ್ಲಿ ಮುಡಾರು ಗ್ರಾಮ ಸಮಿತಿ ವತಿಯಿಂದ…
ಕಾರ್ಕಳ: ಶಾಲಾ ಬಾಲಕಿಗೆ ರಿಕ್ಷಾ ಚಾಲಕನಿಂದ ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣದಲ್ಲಿ ಆರೋಪಿ ಅರೆಸ್ಟ್
ಕಾರ್ಕಳ, ಮಾ.14: ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಾಮುಕ ರಿಕ್ಷಾ ಚಾಲಕನನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ನಿವಾಸಿ ವಸಂತ ಪೂಜಾರಿ( 52) ಎಂಬಾತ ಬಂಧಿತ…
ಅಜೆಕಾರು ಕಲಾಭಿಮಾನಿ ಬಳಗಕ್ಕೆ ರಜತ ಸಂಭ್ರಮ ಪ್ರಯುಕ್ತ ಅ.24,25 ರಂದು ಮುಂಬಯಿ ಯಕ್ಷಗಾನ ಸಮ್ಮೇಳನ – 2026: ಮುಂಬಯಿಯಲ್ಲಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಶ್ಲಾಘನೀಯ: ರಜತ ಸಂಭ್ರಮ ಪೂರ್ವಭಾವಿ ಸಭೆಯಲ್ಲಿ ಡಾ.ಎಂ ಪ್ರಭಾಕರ ಜೋಶಿ ಅಭಿಮತ
ಕಾರ್ಕಳ,ಮಾ14: ಕರಾವಳಿಯವರು ಉದ್ಯೋಗ ಅರಸಿಕೊಂಡು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮ ಕಟ್ಟಿ ಯಶಸ್ಸು ಸಂಪಾದಿಸಿದ್ದಾರೆ.ನಮ್ಮೂರಿನ ಉದ್ಯಮಿಗಳು ತಮ್ಮ ಉದ್ಯಮದ ಜೊತೆಜೊತೆಗೆ ಕರಾವಳಿಯ ಗಂಡು ಕಲೆಯಾದ ಯಕ್ಷಗಾನವನ್ನು ಹಾಗೂ ಕಲಾವಿದರನ್ನು ನಿರಂತರ ಪೋಷಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ…
ಕಾರ್ಕಳ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಸಾವು
ಕಾರ್ಕಳ, ಮಾ.14: ಕಾರ್ಕಳ ಕಸಬಾ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.ಕಸಬಾ ನಿವಾಸಿ ಕೆ.ಜೆ ಉಷಾ (68) ಮೃತಪಟ್ಟ ಮಹಿಳೆ. ಉಷಾ ಅವರು ಕಳೆದ ಕೆಲ ಸಮಯದಿಂದ ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು, ಮಾ.12 ರಂದು ರಾತ್ರಿ ಎಂದಿನಂತೆ ಮನೆಯಲ್ಲಿ ಮಲಗಿದ್ದವರು ಮರುದಿನ…
ಉಡುಪಿ ಅಬಕಾರಿ ಉಪ ಆಯುಕ್ತ ಲೋಕಾಯುಕ್ತ ಬಲೆಗೆ: 8 ಕೋಟಿ 69 ಲಕ್ಷ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ
ಉಡುಪಿ, ಮಾ.14: ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ (DC) ಶ್ರೀನಿವಾಸ್ ಟಿ. ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದು, ಒಟ್ಟು 8 ಕೋಟಿ 69…
ಬಿಪಿಎಲ್ ಕಾರ್ಡ್ ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ: ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಬೆಂಗಳೂರು,ಮಾ.13 : ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ವಾರ್ಷಿಕ ಆದಾಯದ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡುವ ಕುರಿತು ಸರ್ಕಾರ ನಿಧಾರ ಕೈಗೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿಧಾನ ಸಭೆಗೆ ತಿಳಿಸಿದರು. ವಿಧಾನಸಭೆಯ ಪ್ರಶೋತ್ತರ…
ಕಾರ್ಕಳ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ
ಕಾರ್ಕಳ, ಮಾ.13:ಶ್ರೀರಾಮಪ್ಪ ಎಜುಕೇಶನ್ ಟ್ರಸ್ಟ್ ( ರಿ.) ಕಾರ್ಕಳ ಹಾಗೂ ವಿದ್ಯಾ ಭಾರತಿ ಸಂಯೋಜಿತ ಕಾರ್ಕಳ ಪುಲ್ಕೇರಿ ರಾಮಪ್ಪ ಅನದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಆನೆಕೆರೆ ಶ್ರೀ ಕೃಷ್ಣ…
