ಕಾರ್ಕಳ : ದಾಯಾದಿಗಳಿಂದಲೇ ಮೃತ ವ್ಯಕ್ತಿಯ 6.5 ಕೋಟಿ ರೂ. ಮೌಲ್ಯದ ಆಸ್ತಿ, ನಗದು ಲಪಟಾಯಿಸಿ ವಂಚನೆ

ಕಾರ್ಕಳ: ದಾಯಾದಿ ಸೋದರರಿಬ್ಬರು ಸೇರಿಕೊಂಡು ತಮ್ಮದೇ ಕುಟುಂಬದ ಮೃತಪಟ್ಟ ವ್ಯಕ್ತಿಯೊಬ್ಬರ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಲಪಟಾಯಿಸಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆಯ ಮರಣದ ನಂತರ ಅವರ ಹೆಸರಲ್ಲಿದ್ದ ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ, ಷೇರುಗಳು ಹಾಗೂ…

ಮಾಳ : ಜಿಲ್ಲಾ ಮಲೆಕುಡಿಯ ಸಂಘದ ನೂತನ ಸಭಾಭವನ ಲೋಕಾರ್ಪಣೆ – ಮಲೆಕುಡಿಯ ಜನಾಂಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ: ಸಚಿವ ಸುನಿಲ್ ಕುಮಾರ್

ಕಾರ್ಕಳ:ನಮ್ಮ ಸರ್ಕಾರ ಮಲೆಕುಡಿಯ ಸಮುದಾಯದ ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿದ್ದು ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು. ಅವರು ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಉಡುಪಿ ಜಿಲ್ಲಾ ಮಲೆಕುಡಿಯ ಸಭಾಭವನವನ್ನು ಉದ್ಘಾಟಿಸಿ…

ಕಾರ್ಕಳ : ಸ್ಕೂಟರ್ ಗೆ ರಿಕ್ಷಾ ಡಿಕ್ಕಿಯಾಗಿ ಸವಾರನಿಗೆ ಗಾಯ

ಕಾರ್ಕಳ: ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಾಣೂರು ಮಠದ ಬೈಲ್ ಎಂಬಲ್ಲಿ ಸ್ಕೂಟರ್‌ಗೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ. ಮಂಗಳೂರು ಗುರುಪುರದ ರಘುರಾಮ್ ಪೈ ಗಾಯಗೊಂಡ ಸ್ಕೂಟರ್ ಸವಾರ. ಮಂಗಳೂರು ಗುರುಪುರದ ರಘುರಾಮ್ ಪೈ ಎಂಬವರು ತನ್ನ ಸ್ಕೂಟರ್ ನಲ್ಲಿ…

ವಾಲಿಬಾಲ್ ಆಟವಾಡುತ್ತಿದ್ದ ವೇಳೆ ಕುಸಿದುಬಿದ್ದು ಯುವಕ ಸಾವು

ಕಾರ್ಕಳ:ಗೆಳೆಯರೊಂದಿಗೆ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಶ್ರೀದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದಿದೆ. ಕುಕ್ಕುಂದೂರು ಗ್ರಾಮದ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನ ಬಳಿ ನಿವಾಸಿ ಸಂತೋಷ್ (34)…

ನಾಳೆ (ಫೆ.27) ಕಾಡುಹೊಳೆಯಲ್ಲಿ ಹಾಲಾಡಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

ಅಜೆಕಾರು: ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹಾಲಾಡಿ ಇವರಿಂದ ನಾಳೆ (ಫೆ. 27) ರಾತ್ರಿ 8 ರಿಂದ ಕಾಡುಹೊಳೆ ದತ್ತಮಂದಿರದ ವಠಾರದಲ್ಲಿ “ಗಗನತಾರೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಶ್ರೀರಾಮ ಯಕ್ಷಗಾನ ಕಲಾಭಿಮಾನಿ ಬಳಗ ಅಜೆಕಾರು ಇದರ ಸಂಚಾಲಕರಾದ ರತ್ನಾಕರ…

ಫೆ.28ರಂದು ಕಾರ್ಕಳ ಶಾಖಾ ಗ್ರಂಥಾಲಯ ನೂತನ ಕಟ್ಟಡ ಉದ್ಘಾಟನೆ

ಕಾರ್ಕಳ : ಕಾರ್ಕಳದ ಗಾಂಧಿ ಮೈದಾನದ ಸಮೀಪ ಇರುವ ಶಾಖಾ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಫೆ.28ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಒಂದಿಷ್ಟು ಇತಿಹಾಸ: ಕಾರ್ಕಳದ ಮೊಟ್ಟಮೊದಲ ಸರಕಾರಿ ಗ್ರಂಥಾಲಯವು ಅನಂತಶಯನದಲ್ಲಿ 1956ರಲ್ಲಿ ಆರಂಭವಾಯಿತು.…

ಅಜೆಕಾರು: ಆಕಸ್ಮಿಕವಾಗಿ ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ: ಅಗ್ನಿ ಶಾಮಕ ದಳದಿಂದ ರಕ್ಷಣೆ

ಕಾರ್ಕಳ: ಮರ್ಣೆ ಗ್ರಾಮದ ಅಜೆಕಾರು ಸಮೀಪದ ಕೈಕಂಬ ಎಂಬಲ್ಲಿ ಆವರಣವಿಲ್ಲದ ಬಾವಿ ಬಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಅಜೆಕಾರು ಕೈಕಂಬ ನಿವಾಸಿ ಸುಕುಮಾರ್(40) ಎಂಬವರು ಭಾನುವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮೂತ್ರವಿಸರ್ಜನೆಗೆಂದು ಮನೆಯಿಂದ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:26.02.2023, ಭಾನುವಾರ, ಸಂವತ್ಸರ:ಶುಭಕೃತ್, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಶುಕ್ಲಪಕ್ಷ, ನಕ್ಷತ್ರ:ಕೃತ್ತಿಕಾ, ರಾಹುಕಾಲ -09:17 ರಿಂದ 11:16 ಗುಳಿಕಕಾಲ 06:51 ರಿಂದ 08:19 ಸೂರ್ಯೋದಯ (ಉಡುಪಿ) 06:51 ಸೂರ್ಯಾಸ್ತ – 06:37 ರಾಶಿ ಭವಿಷ್ಯ: ಮೇಷ(Aries):…

#ಅಲಿ #ಬಾವ ಮತ್ತು 4#೦ ಮಂದಿ #ಅಕಾಂಕ್ಷಿಗಳು !

ಲೇಖನ: ಜಿತೇಂದ್ರ ಕುಂದೇಶ್ವರ ಮಂಗಳೂರು ಉತ್ತರದಲ್ಲಿ ಕಾಂಗ್ರೆಸಿಂದ #ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಾವಾ ಅವರ ಕೈ ಖಾಲಿಯಾಗಿ ಸ್ವಂತ ಕ್ಷೇತ್ರದಲ್ಲಿ ಮನೆಗೆ ಬೀಗ ಹಾಕಿ ಪೇಟೆಗೆ ಬಂದಿದ್ದಾರೆ. ತಮ್ಮ ಫಾರೂಕ್‌ನಿಂದ ದೇಣಿಗೆ ಸಿಗಬಹುದು ಆದರೆ ಅವರು #ಜೆಡಿಎಸ್‌ ನಲ್ಲಿ…

ವರಂಗ :ಕುಡಿದ ಮತ್ತಿನಲ್ಲಿ ತಂದೆ ಜತೆ ಜಗಳ: ಮಗನ ಕೊಲೆಯಲ್ಲಿ ಅಂತ್ಯ

ಹೆಬ್ರಿ : ಮಗನೊಬ್ಬ ಮದ್ಯಪಾನ ಮಾಡಿಕೊಂಡು ಬಂದು ತಂದೆಯೊAದಿಗೆ ಗಲಾಟೆ ಮಾಡಿದ್ದು, ಇಬ್ಬರ ಜಗಳ ಮಗನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಬ್ರಿ ತಾಲೂಕಿನ ವರಂಗದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ತಂದೆ ಕುಟ್ಟಿ ಪೂಜಾರಿ ಹಾಗೂ ಮೃತಪಟ್ಟ…