ವಿದ್ಯುತ್ ಸಂಪರ್ಕವಿಲ್ಲದೇ ಬರೋಬ್ಬರಿ 30 ವರ್ಷಗಳಿಂದ ಕತ್ತಲಕೂಪದಲ್ಲಿದ್ದ ಮನೆಗೆ ಕೊನೆಗೂ ಬೆಳಕು ಭಾಗ್ಯ! ಇಂಧನ ಸಚಿವ ಸುನಿಲ್ ಕುಮಾರ್ ಕಾರ್ಯವೈಖರಿಗೆ ಸ್ಥಳೀಯರ ಪ್ರಶಂಸೆ

ಉಡುಪಿ: ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಶಂಭುಕಲ್ಲು ಎಂಬಲ್ಲಿನ ಮನೆಯೊಂದು ಕಳೆದ 30 ವರ್ಷಗಳಿಂದ ವಿದ್ಯುತ್ ಸಣಪರ್ಕವನ್ನೇ ಕಾಣದೇ ಅಕ್ಷರಶಃ ಕತ್ತಲಿನ ಕೂಪವಾಗಿತ್ತು. ಹಳೆಯ ಮನೆಯಲ್ಲಿ ಒಬ್ಬರೇ ವಾಸವಿದ್ದ 75ರ ಹರೆಯದ ವಯೋವೃದ್ಧ ದೊಂಬ ಯಾನೆ ದಾಮೋದರ ಭಂಡಾರಿಯವರು ತನ್ನ ಮನೆಗೆ…

ಇಂದಿನಿಂದ (ಮಾ.22) ಮಾ.26 ರವರೆಗೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ

ಕಾರ್ಕಳ: ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದಿನಿಂದ ಮಾರ್ಚ್ 26ರ ವರೆಗೆ ವಾರ್ಷಿಕ ಮಹಾರಥೋತ್ಸವವು ಶ್ರೀ ಬಿ.ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಲಿದೆ. ಮಾ.22 ರಂದು ಧ್ವಜಾರೋಹಣ, 23ರಂದು ಕಟ್ಟೆಪೂಜೆ, ಉತ್ಸವ ಬಲಿ, ಮಾರ್ಚ್.24 ರಂದು ರಥೋತ್ಸವ ನೆರವೇರಲಿದೆ.…

ಕುಕ್ಕುಂದೂರು : ಕತ್ತಿಯಿಂದ ಕಡಿದು ವ್ಯಕ್ತಿಗೆ ಹಲ್ಲೆ

ಕಾರ್ಕಳ :ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ಭಾಮೈದನೋರ್ವ ತನ್ನ ಭಾವನಿಗೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಮಾ.20 ರಂದು ರಾತ್ರಿ ನಡೆದಿದೆ.

ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಆಟೋ ಚಾಲಕ ಪುರುಷೋತ್ತಮ್ ಮನೆ ನವೀಕರಿಸಿ ಯುಗಾದಿ ಗಿಫ್ಟ್​​ ನೀಡಿದ ಟ್ರಸ್ಟ್

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡ ಆಟೋ ಚಾಲಕನಿಗೆ ಇಂದು(ಮಾ.22) ಗುರು ಬೆಳದಿಂಗಳು ​ಫೌಂಡೇಶನ್​ನಿಂದ 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಿದ ಮನೆಯನ್ನು ಹಸ್ತಾಂತರಿಸಲಾಯಿತು. 2022ರ ನವೆಂಬರ್ 19 ರಂದು ಮಂಗಳೂರು ನಗರದ ಗರೋಡಿ ಸಮೀಪದ…

ಮಾ.26 ರಂದು ಕಾರ್ಕಳದಲ್ಲಿ ಶೂದ್ರ ಶಿವ ನಾಟಕ ಪ್ರದರ್ಶನ

ಕಾರ್ಕಳ: ಸಾಮಾಜಿಕ ಬದಲಾವಣೆಯ ಹರಿಕಾರ, ಹಿಂದುಳಿದ ಮತ್ತು ದೀನ ದಲಿತರ ಪ್ರೇರಣಾ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಾಧಾರಿತ “ಶೂದ್ರ ಶಿವ” ಕನ್ನಡ ನಾಟಕವು ಮಾರ್ಚ್ 26 ರವಿವಾರ ಸಂಜೆ 7 ಗಂಟೆಗೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ. ಮಂಗಳೂರಿನ ರುದ್ರ…

ಇನ್ನು 2-3 ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುಣಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಕಾಂಗ್ರೆಸ್ ಇಂದು ಚುನಾವಣೆಗೆ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ 2-3 ದಿನಗಳ ಬಳಿಕ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್…

ರಾಜ್ಯ ಮಟ್ಟದ ಪಂಜ ಕುಸ್ತಿ (ಆರ್ಮ್ ರಸ್ಟ್ಲಿಂಗ್) ಸ್ಪರ್ಧೆ: ಬೈಲೂರಿನ ಸುಜಿತ್ ನಾಯಕ್ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಾರ್ಕಳ: ಹಾಸನದಲ್ಲಿ ಇತ್ತೀಚೆಗೆ ನಡೆದ ಆರ್ಮ್ ರಸ್ಟ್ಲಿಂಗ್(ಪಂಜ ಕುಸ್ತಿ) ಸ್ಪರ್ಧೆಯಲ್ಲಿ ಕಾರ್ಕಳ ತಾಲೂಕಿನ ಬೈಲೂರಿನ ಯುವಕ ಸುಜಿತ್ ನಾಯಕ್ ಚಿನ್ನದ ಪದಕ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಸುಜಿತ್ ನಾಯಕ್ ಮುಂದಿನ ತಿಂಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂಜ‌ ಕುಸ್ತಿ…

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಬಿಗ್ ಶಾಕ್! ಸಚಿವ ಭೈರತಿ ಬಸವರಾಜ ಕಾಂಗ್ರೆಸ್ ಗೆ ಸೇರ್ಪಡೆ?

ಬೆಂಗಳೂರು, ಮಾರ್ಚ್ 22: ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಗೆ ಸಚಿವ ಭೈರತಿ ಬಸವರಾಜ ಬಿಗ್ ಶಾಕ್ ನೀಡಲಿದ್ದಾರೆ ಎನ್ನುವ ಮಾಹಿತಿ ಹಬ್ಬಿದೆ. ಬಿಜೆಪಿ ಎಂಎಲ್ ಸಿ ಬಾಬುರಾವ್ ಚಿಂಚನಸೂರ ಬಿಜೆಪಿ ತೊರೆದ ಬೆನ್ನಲ್ಲೇ ಸಚಿವ ಭೈರತಿ ಬಸವರಾಜ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದ್ದು,ಈ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:22.03.2023, ಬುಧವಾರ, ಸಂವತ್ಸರ:ಶುಭಕೃತ್, ಉತ್ತರಾಯಣ,ವಸಂತ ಋತು, ಮೀನ ಮಾಸ,ಶುಕ್ಲಪಕ್ಷ,ನಕ್ಷತ್ರ:ಉತ್ತರಾಭಾದ್ರ,,ರಾಹುಕಾಲ -12:38 ರಿಂದ 02:09 ಗುಳಿಕಕಾಲ-11:08 ರಿಂದ 12:38 ಸೂರ್ಯೋದಯ (ಉಡುಪಿ) 06:35 ಸೂರ್ಯಾಸ್ತ – 06:40 ದಿನವಿಶೇಷ: ವಸಂತ ಋತು, ಚಾಂದ್ರಮಾನ ಯುಗಾದಿ ರಾಶಿಭವಿಷ್ಯ ಮೇಷ (Aries):…

ಕುಕ್ಕುಂದೂರು : ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಕಾರ್ಕಳ : ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಬೈರ್ಲಬೆಟ್ಟುಗುತ್ತು ಹಾಡಿ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಮಾರ್ಚ್ 21ರಂದು ಪತ್ತೆಯಾಗಿದೆ. ಕುಕ್ಕುಂದೂರಿನ ಭರತ್ ಶೆಟ್ಟಿ ಎಂಬವರು ಮಾರ್ಚ್ 21ರಂದು ಬೆಳಿಗ್ಗೆ 9 ಗಂಟೆಯ ವೇಳೆಗೆ ಬೈರ್ಲಬೆಟ್ಟುಗುತ್ತು ಹಾಡಿ ಪ್ರದೇಶದ ಬಳಿ…