Share this news

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ 3 ಭಯೋತ್ಪಾದಕರು ಪಾಕಿಸ್ತಾನದ ಲಷ್ಕರ್ ಸಂಘಟನೆಗೆ ಸೇರಿದವರು ಎನ್ನುವ ಮಾಹಿತಿ NIA ತನಿಖೆಯಿಂದ ಬಯಲಾಗಿದೆ.ಪಹಲ್ಗಾಮ್ ದಾಳಿಯಲ್ಲಿ ತಮ್ಮ ಕೈವಾಡವಿಲ್ಲ ಎಂದು ಪಾಕಿಸ್ತಾನ ಪದೇಪದೆ ಹೇಳಿಕೆ ನೀಡಿತ್ತು. ಆದರೆ, ಇದೀಗ ಪಾಕಿಸ್ತಾನದ ಕುತಂತ್ರ ಬುದ್ಧಿ ಮತ್ತೊಮ್ಮೆ ಬಯಲಾಗಿದೆ. ಆ ಉಗ್ರರಿಗೆ ಆಶ್ರಯ ನೀಡಿದವರಿಗೆ ಕೇವಲ 3000 ರೂ.ಗಳನ್ನು ನೀಡಲಾಗಿತ್ತು. ಈಗಾಗಲೇ ದಾಳಿಗೆ ಸಹಾಯ ಮಾಡಿದ ಇಬ್ಬರು ಸ್ಥಳೀಯ ಸಹಾಯಕರನ್ನು ಬಂಧಿಸಲಾಗಿದೆ. ಈ ಭಯೋತ್ಪಾದಕರಿಗೆ ಸ್ಥಳೀಯ ಮಟ್ಟದಲ್ಲಿಯೂ ಸಹಾಯ ಸಿಕ್ಕಿತು.

ದಾಳಿ ನಡೆದ ಸ್ಥಳದಿಂದ ವಶಪಡಿಸಿಕೊಂಡ ಕಾರ್ಟ್ರಿಡ್ಜ್‌ಗಳು ಎನ್‌ಕೌಂಟರ್ ನಂತರ ಭಯೋತ್ಪಾದಕರಿಂದ ವಶಪಡಿಸಿಕೊಂಡ ಕಾರ್ಟ್ರಿಡ್ಜ್‌ಗಳಂತೆಯೇ ಇದ್ದವು ಎಂದು ಎನ್‌ಐಎ ವರದಿ ಹೇಳಿದೆ. ಆಪರೇಷನ್ ಮಹಾದೇವ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ ನಂತರ ಎನ್​ಐಎಯ ಮೊದಲ ಅಧಿಕೃತ ಹೇಳಿಕೆ ಇದಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಬದುಕುಳಿದವರ ಹಿಂದಿನ ಹೇಳಿಕೆಗಳು 4ರಿಂದ 5 ದಾಳಿಕೋರರು ಇದ್ದರು ಎಂದು ಸೂಚಿಸಿದ್ದವು. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸ್ಥಳೀಯರೊಬ್ಬರು ಸೇರಿದಂತೆ ಹೆಚ್ಚಿನ ಜನರು ಭಾಗಿಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಈಗ ಎನ್ಐಎ ಕೇವಲ ಮೂವರು ಪಾಕಿಸ್ತಾನಿ ಭಯೋತ್ಪಾದಕರು ಮಾತ್ರ ದಾಳಿ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಎನ್​ಐಎ ತನಿಖೆಯಲ್ಲಿ ಈ ಮೂವರು ಬೈಸರನ್ ಮೇಲೆ ದಾಳಿ ನಡೆಸಿದ್ದರು ಎಂಬುದು ಖಚಿತವಾಗಿದೆ. ಪಹಲ್ಗಾಮ್ ಜಮ್ಮು ಕಾಶ್ಮೀರದಿಂದ ದೂರದಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾಗಿದೆ. ಭಯೋತ್ಪಾದಕರು ಅದನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲು ಬಯಸಿದ್ದರು. ಅಲ್ಲಿ ಬೇರೆ ಪ್ರವಾಸಿ ಸ್ಥಳಗಳಿಗೆ ಹೋಲಿಸಿದರೆ ಕಡಿಮೆ ಪೊಲೀಸ್ ಬಂದೋಬಸ್ತ್ ಇತ್ತು, ಹೋಗುವ ದಾರಿ ದುರ್ಗಮವಾಗಿತ್ತು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿದುಬಂದಿದೆ. ಆಹಾರ ಮತ್ತು ವಸತಿಗಾಗಿ ಇಬ್ಬರು ಸ್ಥಳೀಯರಿಗೆ ಆ ಉಗ್ರರು 3,000 ರೂ.ಗಳನ್ನು ಸಹ ಪಾವತಿಸಿದ್ದಾರೆ. ಅವರಿಬ್ಬರನ್ನು ಬಂಧಿಸಲಾಗಿದೆ.

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *