ಕಾರ್ಕಳ: ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ರಾಜ್ಯ ಸರ್ಕಾರವು ತಾಲೂಕು ಹಾಗೂ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮಗಳನ್ನು ನಡೆಸುತ್ತಿದೆ, ಆದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದ್ದ ವೇದಿಕೆ ಗೊಂದಲದ ಗೂಡಾಗಿ ಪರಿಣಮಿಸಿತು. ಕಾರ್ಕಳ ಪೆರ್ವಾಜೆಯ ನಾರಾಯಣ ಗುರು ಸಭಾಭವನದಲ್ಲಿ ಜು 12ರಂದು ಶುಕ್ರವಾರ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ನೇತೃತ್ವದಲ್ಲಿ ನಡೆದ ಜನ ಸ್ಪಂದನ ಸಭೆಯಲ್ಲಿ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಕುರಿತು ನಿಟ್ಟೆ ಗ್ರಾಮದ ವಿವೇಕ್ ಶೆಟ್ಟಿ ಎಂಬವರು ಅಹವಾಲು ನೀಡಿದ್ದರು. ಅವರು ವೇದಿಕೆಯಲ್ಲಿ ಪರಶುರಾಮ ಮೂರ್ತಿಯ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು ,ಬಳಿಕ ಈ ಪ್ರಕರಣವು ಸಿಐಡಿ ತನಿಖೆಯಲ್ಲಿದೆ ಎಂದು ಶಾಸಕರು ಸ್ಪಷ್ಟನೆ ನೀಡಿದಾಗ, ಈ ಯೋಜನೆ ನಿಮ್ಮ ಅಧ್ಯಕ್ಷತೆಯಲ್ಲಿ ನಡೆದಿದ್ದು ಎಂದು ವಿವೇಕ್ ಶೆಟ್ಟಿ ಹೇಳಿದಾಗ,ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ಬೇಕಾದರೆ ಕೋರ್ಟಿಗೆ ಹೋಗಿ ಎಂದರು. ಈ ಎಲ್ಲಾ ದೃಶ್ಯವನ್ನು ಪುರಸಭಾ ಸದಸ್ಯ ಶುಭದ ರಾವ್ ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸುತ್ತಿದ್ದರು, ವಿಡಿಯೋ ಚಿತ್ರೀಕರಣಕ್ಕೆ ಆಕ್ಷೇಪ ಎತ್ತಿದ ಶಾಸಕ ಸುನಿಲ್ ಕುಮಾರ್, ಶುಭದ್ ರಾವ್ ಮೊಬೈಲ್ ಸೀಜ್ ಮಾಡುವಂತೆ ಪೊಲೀಸರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಶಾಸಕರ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಏಕಾಎಕಿ ವಿಡಿಯೋ ಮಾಡದಂತೆ ಶುಭದ್ ರಾವ್ ಅವರ ಮೊಬೈಲ್ ಕಸಿಯಲು ಮುಂದಾದರು, ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಾಗ,ನಾವು ಜನಸ್ಪಂದನ ಸಭೆಗೆ ಸಮಸ್ಯೆ ಹೇಳಿಕೊಳ್ಳಲು ಬಂದಿರುವುದು, ಮೊಬೈಲ್ ಕಸಿಯಲು ನಿಮಗೆ ಅಧಿಕಾರ ಇಲ್ಲ ಎಂದಾಗ ಇಡೀ ಸಭೆಯೇ ಗೊಂದಲದ ಗೂಡಾಯಿತು.ಇತ್ತ ಸಭೆಯಲ್ಲೇ ಶುಭದ ರಾವ್ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿದಾಗ, ಸಚಿವ ಡಿವೈಎಸ್ಪಿ ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಈ ಘಟನೆಯ ಕುರಿತು ದೃಶ್ಯಾವಳಿಗಳನ್ನು ಸೆರೆ ಹಿಡಿಯುತ್ತಿದ್ದ ಪತ್ರಕರ್ತರಿಗೆ ವಿಡಿಯೋ ಮಾಡದಂತೆ ಜಿಲ್ಲಾಧಿಕಾರಿ ಪೊಲೀಸರಿಗೆ ಸೂಚಿಸಿದಾಗ ಪೊಲೀಸರು ವಿಡಿಯೋ ಮಾಡದಂತೆ ಪತ್ರಕರ್ತರನ್ನು ತಡೆಯಲು ಮುಂದಾದರು ,ಇದರಿಂದ ಆಕ್ರೋಶಗೊಂಡ ಪತ್ರಕರ್ತರು ಪೊಲೀಸರ ಕ್ರಮ ಖಂಡಿಸಿದಾಗ ತೀವೃ ಮಾತಿನ ಚಕಮಕಿ ನಡೆದ ಪ್ರಸಂಗ ನಡೆಯಿತು.
ಬಳಿಕ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಡಾ.ಅರುಣ್‌ಕುಮಾರ್ ಮಾತನಾಡಿ, ಈ ಪ್ರಕರಣ ಈಗಾಗಲೇ ತನಿಖಾ ಹಂತದಲ್ಲಿದೆ ಎಲ್ಲವನ್ನೂ ಪರಿಶೀಲನೆ ನಡೆಸೊಣ ಎನ್ನುವ ಮೂಲಕ ಈ ವಿವಾದವನ್ನು ಬಗೆಹರಿಸಿದರು.
ಸಾರ್ವಜನಿಕ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡಿಲ್ಲ: ಸಾರ್ವಜನಿಕ ಆಕ್ರೋಶ
ತಾಲೂಕು ಮಟ್ಟದ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಲು ಕೌಂಟರ್‌ಗಳನ್ನು ತೆರೆದು ಸರತಿ ಸಾಲಿನಂತೆ ವೇದಿಕೆಯಲ್ಲೇ ಅರ್ಜಿಗಳನ್ನು ವಿಲೇ ಮಾಡಲಾಯಿತು. ಆದರೆ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲ ಇದು ಕೇವಲ ಕಾಟಾಚಾರದ ಸಭೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಬೇಕಿದ್ದ ಅಧಿಕಾರಿಗಳು ಸಾರ್ವಜನಿಕರಿಗೆ ಮೈಕ್ ನೀಡದೇ ಅಲ್ಲದೇ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಡದೇ ಅಹವಾಲುಗಳನ್ನು ಪಡೆದು ಕಂದಾಯ ಅದಾಲತ್ ರೀತಿಯಲ್ಲಿ ವೇದಿಕೆಯಲ್ಲೇ ಮಾತುಕತೆ ನಡೆಸಿದ್ದಾರೆ, ಜನ ಸ್ಪಂದನ ಸಭೆಯಲ್ಲಿ ಜನರ ಸಮಸ್ಯೆಗಳ ಸ್ವರೂಪ ಹಾಗೂ ದೂರಿನ ಕುರಿತು ಕೈಗೊಂಡ ಕ್ರಮದ ಕುರಿತು ಸಭೆಯಲ್ಲಿ ಮಾಹಿತಿ ನೀಡದೇ ಇದು ಕೇವಲ ಕಾಟಾಚಾರಕ್ಕೆ ನಡೆಸಿದ ಜನ ಸ್ಪಂದನ ಸಭೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟು 92 ಅರ್ಜಿಗಳು ಬಂದಿದ್ದು, ಹೆಚ್ಚಿನ ಅರ್ಜಿಗಳನ್ನು ಆದ್ಯತೆ ಮೇರೆಗೆ 15 ದಿನಗಳಿಂದ ಒಂದು ತಿಂಗಳಿನೊಳಗೆ ಇತ್ಯರ್ಥಪಡಿಸಲಾಗುವುದು ಎಂದರು.
ವೇದಿಕೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್, ಜಿ.ಪಂ ಸಿ.ಇ.ಓ ಪ್ರತೀಕ್ ಬಾಯಲ್, ಕಾರ್ಕಳ ತಹಶೀಲ್ದಾರ್ ನರಸಪ್ಪ ತಹಸೀಲ್ದಾರ್ ಮುಂತಾದವರು ಉಪಸ್ಥಿತರಿದ್ದರು