
ಕಾರ್ಕಳ,ಜ.14: ಬೈಲೂರು ಉಮ್ಮಿಕಲ್ ಬೆಟ್ಟದ ಪರಶುರಾಮ ಥೀಂ ಪಾರ್ಕ್ ನಲ್ಲಿ ಕಳ್ಳತನ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯಬಿಟ್ಟಿದ್ದ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಂತೋಷ್ ದೇವಾಡಿಗ ಎಂಬಾತ ಫೇಸ್ಬುಕ್ ಐಡಿಯಲ್ಲಿ ʻʻಪರಶುರಾಮ ಥೀಮ್ ಪಾರ್ಕ್ ಕಳ್ಳತನಕ್ಕೆ ಟ್ವಿಸ್ಟ್, ಥೀಮ್ ಪಾರ್ಕ್ ಕಟ್ಟಡ ಒಳಗಿನ ಫ್ಯಾನ್ ಎಲೆಕ್ಟ್ರಿಕಲ್ ಉಪಕರಣಗಳನ್ನು ಮೊದಲೇ ಎಗರಿಸಿದ RSS ಕಾರ್ಯಕರ್ತʻʻ ಎಂಬ ಬರವಣಿಗೆಯ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಈತನ ವಿರುದ್ಧ ಸಮಾಜದಲ್ಲಿ ಜಾತಿ ಧರ್ಮ ಸಂಘರ್ಷ ಹುಟ್ಟು ಹಾಕಿ ಅಶಾಂತಿಯನ್ನು ಕೆಡಿಸುವ ದುರುದ್ದೇಶ ಮತ್ತು ರಾಜಕೀಯ ದುರ್ಲಾಭ ಪಡೆಯುವ ಉದ್ದೇಶದಿಂದ ಈ ಸಂದೇಶವನ್ನು ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ ಎಂಬ ಆರೋಪದಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.
.
.
.
