Share this news

ದುಬೈ, ಸೆ 29: ಏಷ್ಯಾಕಪ್ ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿ ಮತ್ತೊಮ್ಮೆ ಏಷ್ಯಾ ಕಪ್ ಗೆದ್ದ ಭಾರತಕ್ಕೆ ಕಪ್ ನೀಡದೇ ಟ್ರೋಫಿಯೊಂದಿಗೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಓಡಿಹೋದ ಘಟನೆ ನಡೆದಿದೆ.
ಭಾರತದ ಅಮೋಘ ಗೆಲುವಿನ ನಂತರ, ಪಾಕಿಸ್ತಾನಿ ಸಚಿವ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದಾಗ ಆತ ಟ್ರೋಪಿಯ ಜತೆ ಓಡಿಹೋಗಿದ್ದು ಈ ವಿಚಾರ ಜಾಗತಿಕ ಮಟ್ಟದಲ್ಲಿ ನಗೆಪಾಟಲೀಗೀಡಾಗಿದೆ. ಇದರಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಳಂಬಗೊಳಿಸಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೈಯಕ್ತಿಕ ಪ್ರದರ್ಶಕರನ್ನು ಮಾತ್ರ ಗೌರವಿಸಲಾಯಿತು. ಭಾರತ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರೂ, ನಖ್ವಿ ವೇದಿಕೆಯಲ್ಲಿಯೇ ಇದ್ದರು ಮತ್ತು ಅಂತಿಮವಾಗಿ, ವಿಜೇತ ತಂಡಕ್ಕೆ ಟ್ರೋಫಿಯನ್ನು ನೀಡಲಾಗಿಲ್ಲ.ಆದರೆ ಸಮಾರಂಭ ಮುಗಿದ ತಕ್ಷಣ, ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಮೈದಾನದಿಂದ ಪಲಾಯನ ಮಾಡುತ್ತಿರುವುದು ಕಂಡುಬAದಿತು, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇಂತಹ ಬೆಳವಣಿಗೆ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *