Share this news

ಕಾರ್ಕಳ,ಮಾ.03: ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಂದಿನ ಇಂಧನ ಸಚಿವರಾಗಿದ್ದ ಸುನಿಲ್ ಕುಮಾರ್ ಅವರು ಕಾರ್ಕಳ ಭಾಗದ ರೈತರ ನೂರಾರು ಕೃಷಿ ಜಮೀನಿಗೆ ಅನುಕೂಲವಾಗುವಂತೆ ಎಣ್ಣೆಹೊಳೆ ಏತ ನೀರಾವರಿ ಯೋಜನೆ ನಿರ್ಮಿಸಿದ್ದರು.

ನೂರಾರು ಎಕರೆಗೆ ನೀರಾವರಿ ಕಲ್ಪಿಸಬೇಕಿದ್ದ ಈ ಯೋಜನೆಯ ವಿದ್ಯುತ್ ಬಿಲ್ ಪಾವತಿ ಬಾಕಿಯಾದ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದು,ರಾಜ್ಯ ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ.

ಕಳೆದ 3 ವರ್ಷಗಳಿಂದ ಈ ಭಾಗದ ನೂರಾರು ರೈತರ ಕೃಷಿ ಭೂಮಿಗೆ ನಿರಂತರವಾಗಿ ನೀರಾವರಿಯನ್ನು ಒದಗಿಸುತ್ತಿದ್ದ ಈ ಮಹತ್ವಾಕಾಂಕ್ಷಿ ಯೋಜನೆ, ವಿದ್ಯುತ್ ಬಿಲ್ ಪಾವತಿಯಾಗದ ಕಾರಣಕ್ಕೆ ಇಂದು ಸ್ಥಗಿತಗೊಂಡಿರುವುದು ಅತ್ಯಂತ ದುಃಖದ ಹಾಗೂ ನಾಚಿಕೆಗೇಡಿನ ಸಂಗತಿ. ಸುಮಾರು 2 ಕೋಟಿ ರೂಪಾಯಿಗೂ ಅಧಿಕ ವಿದ್ಯುತ್ ಬಿಲ್ಲನ್ನು ಪಾವತಿಸದೇ ಬಾಕಿ ಇರಿಸಿಕೊಂಡು ಈ ಯೋಜನೆ ಸ್ಥಗಿತಗೊಳ್ಳಲು ನೇರ ಹೊಣೆಯಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ, ಕಾಂಗ್ರೆಸ್ಸಿನ ಈ ರೈತ ವಿರೋಧಿ ನಡೆಯ ವಿರುದ್ಧ ಮಾರ್ಚ್ 4 ರಂದು ಕಾರ್ಕಳ ಬಿಜೆಪಿಯ ವತಿಯಿಂದ ಎಣ್ಣೆಹೊಳೆ ಅಣೆಕಟ್ಟಿನ ಬಳಿ ಸಂಜೆ 4 ಗಂಟೆಗೆ ಪ್ರತಿಭಟನೆ ನಡೆಯಲಿದೆ.
ಈ ಪ್ರತಿಭಟನೆಗೆ ಕೃಷಿಕರು, ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಬೇಕೆಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮನವಿ ಮಾಡಿದ್ದಾರೆ.

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

Leave a Reply

Your email address will not be published. Required fields are marked *