Share this news

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಕೇಸ್ ಸಂಬಂಧ ಎನ್ಐಎ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ. ಆ ಚಾರ್ಜ್ ಶೀಟ್ ನಲ್ಲಿ ರಾಮೇಶ್ವರಂ ಕೆಫೆ ದಿನವೇ ಕರ್ನಾಟಕ ಬಿಜೆಪಿ ಕಚೇರಿಯನ್ನು ಸ್ಪೋಟಿಸಲು ಪ್ಲಾನ್ ಮಾಡಿದ್ದರು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಪ್ಲ್ಯಾನ್​ ವಿಫಲವಾದ ಹಿನ್ನೆಲೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಲು ಪ್ಲ್ಯಾನ್​ ಮಾಡಿದ್ದರು. ಅದರಂತೆ ಆರೋಪಿಗಳು ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಿದ್ದರು ಎಂದು ಎನ್​ಐಎ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​​ಶೀಟ್​​​ನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ  ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​ಐಎ ಅಧಿಕಾರಿಗಳಿಂದ ನಾಲ್ವರು ಆರೋಪಿಗಳ ವಿರುದ್ಧ ವಿಶೇಷ ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಕೆ ಮಾಡಲಾಗಿದೆ. ಆರೋಪಿಗಳಾದ ಅಬ್ದುಲ್ ಮತಿನ್ ತಾಹಾ, ಮುಸಾವೀರ್ ಹುಸೇನ್, ಶೋಯೆಬ್ ಮಿರ್ಜಾ ಸೇರಿ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಮಾರ್ಚ್ 1ರಂದು ನಡೆದಿದ್ದ ರಾಮೇಶ್ವರಂ ಕೆಫೆ ಬ್ಲಾಸ್ಟ್​ ಪ್ರಕರಣದ ತನಿಖೆ ಚುರುಕಾಗಿತ್ತು. ಟೋಪಿವಾಲನ ಬೆನ್ನತ್ತಿರುವ ಎನ್​ಐಎ, ದಿಕ್ಕು ದಿಕ್ಕಿನಲ್ಲೂ ತಲಾಶ್ ನಡೆಸಿದ್ದರು. ತನಿಖೆ ವೇಳೆ ಮುಸಾವಿರ್ ಹುಸೇನ್ ಶಾಜೀಬ್ ಎಂಬಾತ ಬಾಂಬ್ ಇಟ್ಟಿರಬಹುದು. ಆತನಿಗೆ ಅಬ್ದುಲ್ ಮತೀನ್ ತಾಹ ಸಹಾಯ ಮಾಡಿರುವ ಶಂಕೆ ವ್ಯಕ್ತ ವ್ಯಕ್ತವಾಗಿತ್ತು. ಈ ಇಬ್ಬರು ಐಸಿಸ್ ಹಾಗೂ ಅಲ್ ಹಿಂದ್ ಗ್ರೂಪ್​ನ ಘೋಷಿತ ಉಗ್ರರು. ಕ್ರಿಮಿಗಳ ಜತೆ ಇವ್ರಿಗೆ ಕನೆಕ್ಷನ್​ ಇರಬಹುದೆಂದು ಇಬ್ಬರನ್ನೂ ಎನ್​ಐಎ ವಶಕ್ಕೆ ಪಡೆದಿತ್ತು.

 

 

 

    

                        

                          

                        

                       

Leave a Reply

Your email address will not be published. Required fields are marked *