
ಬೆಂಗಳೂರು,ಜ.13 : ಭಾರತದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ವಿಚಾರದಲ್ಲಿ ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾ ವಲಸಿಗರ ಪತ್ತೆಕಾರ್ಯಚರಣೆ ಮುಂದುವರಿದಿದ್ದು, ಆನೇಕಲ್ ಉಪವಿಭಾಗ ಪೊಲೀಸರು ಇದೀಗ ಶಂಕಿತ ಅಕ್ರಮ ಬಾಂಗ್ಲಾ ವಲಸಿಗರು ವಾಸವಿದ್ದ ಶೆಡ್ ಮೇಲೆ ಪೊಲೀಸರು ದಾಳಿ ಮಾಡಿ 37 ಬಾಂಗ್ಲಾ ವಲಸಿಗರನ್ನು ಬಂಧಿಸಿದ್ದಾರೆ. ಒಂದೇ ವಾರದಲ್ಲಿ ಪೊಲೀಸರು ಹಲವಡೆ ಸರಣಿ ದಾಳಿ ನಡೆಸಿದ್ದಾರೆ. ಬನ್ನೇರುಘಟ್ಟ ವ್ಯಾಪ್ತಿಯಲ್ಲಿ 6 ಮಕ್ಕಳು ಸೇರಿ 20 ಜನ ಪತ್ತೆಯಾಗಿದ್ದರೆ, ಅತ್ತಿಬೆಲೆ ಠಾಣ ವ್ಯಾಪ್ತಿಯಲ್ಲಿ ಇಬ್ಬರು ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಕಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ಸೃಷ್ಟಿ ಮಾಡಿ ಬಂದಿರುವ ಆರೋಪ ಕೇಳಿ ಬಂದಿದೆ.
ಗುಜರಿ ದಾಸ್ತಾನು ಶೆಡ್ ಗಳಲ್ಲಿ ಬಾಂಗ್ಲಾ ವಲಸಿಗರು ವಾಸವಿದ್ದು, ಅಲ್ಲದೆ ಕೆಲವು ವಲಸಿಗರು ಅಪಾರ್ಟ್ಮೆಂಟ್ ಗಳಲ್ಲಿ ಸ್ವಚ್ಚತಾ ಕಾರ್ಯ, ರಾತ್ರಿಯ ವೇಳೆ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು.


.
.
