Share this news

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಡಿವಾಳಬೆಟ್ಟು ಎಂಬಲ್ಲಿ ಕರಾವಳಿ ಕೋಳಿ ಫಾರಂ ಬಳಿ ಹಾಡಿಯಲ್ಲಿ ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಅಂದರ್-ಬಾಹರ್ ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಐವರನ್ನು ಹೆಬ್ರಿ ಕ್ರೈಂ ಎಸ್ಐ ಮಹಾಂತೇಶ ಜಾಬ ಗೌಡ ನೇತೃತ್ವದ ಪೊಲೀಸ್ ತಂಡ ವಶಕ್ಕೆ ಪಡೆದು ಬಂಧಿತರಿಂದ 9,700 ನಗದು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ಈ ದಾಳಿ‌ ನಡೆದಿದ್ದು 5-6 ಜನರ ಹಣವನ್ನು ಪಣವಿಟ್ಟು ಅಂದರ್ ಬಾಹರ್ ಇಸ್ಟೀಟ್ ಜುಗಾರಿ ಆಡುತ್ತಿದ್ದವರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಲಾಗಿದೆ.

             

Leave a Reply

Your email address will not be published. Required fields are marked *