
ಸಾಂಧರ್ಬಿಕ ಚಿತ್ರ
ಬೆಂಗಳೂರು,ನ.12 : ದೆಹಲಿಯಲ್ಲಿ ಕೆಂಪು ಕೋಟೆಯ ಬಳಿ ಸ್ಫೋಟದ ಬಳಿಕ ಇದೀಗ ಬೆಂಗಳೂರಿನಲ್ಲಿರುವ ಪಾಕಿಸ್ತಾನ ಪ್ರಜೆಗಳ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ರಾಜಭವನ ರಸ್ತೆಯಲ್ಲಿರುವ ಪಾಕಿಸ್ತಾನ ಪ್ರಜೆಗಳ ಆಸ್ತಿ ಹರಾಜು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತದಿAದ ಪಾಕಿಸ್ತಾನ ಹಾಗೂ ಚೀನಾಗೆ ಹೋಗಿ ಅಲ್ಲಿನ ನಾಗರಿಕತ್ವ ಪಡೆದವರ ಆಸ್ತಿ ಕಸ್ಟೋಡಿಯನ್ ಆಫ್ ಎನಿಮಿ ಪ್ರಾಪರ್ಟಿ ಫಾರ್ ಇಂಡಿಯಾ ದಿಂದ ಆಸ್ತಿ ಗುರುತಿಸಲಾಗಿದ್ದು, ಬೆಂಗಳೂರು ನಗರ ಜಿಲ್ಲಾಡಳಿತವು ಎನಿಮಿ ಆಸ್ತಿಗೆ ಸರ್ಕಾರಿ ದರ ಹಾಗೂ ಮಾರುಕಟ್ಟೆ ದರ ನಿಗದಿ ಮಾಡಿದ ದರ ನಿಗದಿ ಮಾಡಿದೆ.ಬೆಂಗಳೂರು ನಗರದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ಪಾಕಿಸ್ತಾನ ಪ್ರಜೆಗಳ ಆಸ್ತಿ ಗುರುತು ಪತ್ತೆ ಮಾಡಿದೆ. ಇದೇ ತಿಂಗಳು ಪಾಕಿಸ್ತಾನ ಪ್ರಜೆಗಳ ಆಸ್ತಿ ಹರಾಜು ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ಹರಾಜಿನಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಇದೆ.

