
ಬೆಂಗಳೂರು,ಜ.17: ಅಕ್ರಮ ವಲಸಿಗರ ದಾಖಲೆಗಳನ್ನು ಪರಿಶೀಲಿಸುತ್ತಿದ್ದ ಆರೋಪದಡಿಯಲ್ಲಿ ಸಾಮಾಜಿಕ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸರು ಶುಕ್ರವಾರ ತಡರಾತ್ರಿ ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರು ಅಕ್ರಮ ವಲಸಿಗರ ಶೆಡ್‌ಗಳಿಗೆ ಹೋಗಿ ಅಲ್ಲಿ ವಾಸಿಸುತ್ತಿರುವವರ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಶೆಡ್ ವಾಸಿಗಳ ರಾಷ್ಟ್ರೀಯತೆಯನ್ನು ಪ್ರಶ್ನಿಸಿದ್ದರು. ಈ ವಿಡಿಯೋಗಳನ್ನು ಹಂಚಿಕೊAಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊAಡು ಸರ್ಕಾರಕ್ಕೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದರು. ಜನಾಂದೋಲನ ಸಂಘಟನೆ ಪುನೀತ್ ಕೆರೆಹಳ್ಳಿ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇಮೇಲ್ ಮೂಲಕ ಮನವಿ ಸಲ್ಲಿಸಿತ್ತು. ದೂರಿನ ಹಿನ್ನಲೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದರು. ಇದೀಗ ಪುನೀತ್ ಹಾಗೂ ಆತನ ಸಂಗಡಿಗರನ್ನು ಬಿಡುಗಡೆಗೊಳಿಸಲಾಗಿದೆ.
ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಮಾತಾಡಿದ್ರೆ ಕೇಸ್ ಹಾಕುತ್ತಾರೆ: ಪುನೀತ್ ಕೆರೆಹಳ್ಳಿ
ಬಾಂಗ್ಲಾದೇಶದ ನಾಗರಿಕರು ಗಡಿಯಲ್ಲಿ ಒಳನುಸುಳಿ ದೇಶದೆಲ್ಲಡೆ ವಾಸವಿದ್ದಾರೆ. ಬಾಂಗ್ಲಾದೇಶದ ಓಟರ್ ಐಡಿ, ಡ್ರೆöÊವಿಂಗ್ ಲೈಸನ್ಸ್ ಹೊಂದಿವರಿಗೂ ಬೆಂಗಳೂರಿನಲ್ಲಿ 1500 ರೂ ಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮಾಡಿಕೊಡಲಾಗುತ್ತಿದೆ. ನಾವು ಅಕ್ರಮ ಬಾಂಗ್ಲಾ ಪ್ರಜೆಗಳ ವಿರುದ್ಧ ಹೋರಾಟ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದ್ದಾರೆ. ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪುನೀತ್ ಕೆರೆಹಳ್ಳಿ ಗುಡುಗಿದ್ದಾರೆ.

.
.
.
.
