Share this news

ಕಾರ್ಕಳ, ಆ.14: ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಶ್ವದ ಜ್ಞಾನವು ಪ್ರತಿ ಮಗುವಿಗೂ ಪುಸ್ತಕದ ಮೂಲಕ ತಲುಪಬೇಕು. ಮನುಷ್ಯನ ಸಮಗ್ರ ವಿಕಾಸಕ್ಕೆ ಸಾಹಿತ್ಯ ಪೂರಕ ಎಂದು ಲೇಖಕ, ಸಿನಿಮಾ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಆ,13 ರಂದು ಕ್ರಿಯೇಟಿವ್ ಪುಸ್ತಕಮನೆ ವತಿಯಿಂದ ಆಯೋಜಿಸಿದ ಪುಸ್ತಕ ಧಾರೆ-2025 ಕಾರ್ಯಕ್ರಮದಲ್ಲಿ 22 ಕೃತಿಗಳ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕ ಧಾರಾ ಕಾರ್ಯಕ್ರಮ ಅಮೃತಧಾರೆಯಂತಿದ್ದು, ಬೆಳಗುವ ದೀಪದಂತಿದೆ. ಇದು ಸಾಹಿತ್ಯದ ಸಂಗತವನ್ನು ಜೀವಂತವಾಗಿ ತೋರಿಸಿದೆ. ನಾಗತಿಹಳ್ಳಿ ಅವರಲ್ಲಿ 10,000ಕ್ಕೂ ಹೆಚ್ಚು ಪುಸ್ತಕಗಳ ಭಂಡಾರವಿದ್ದು, ಅವರನ್ನು ಓದಿ ಇಲ್ಲಿಂದಲೇ ಕೆ.ಎ.ಎಸ್. ಸೇರಿದಂತೆ ಅನೇಕರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಪುಸ್ತಕಗಳು ಮಕ್ಕಳ ಕಲ್ಪನಾಶಕ್ತಿಯನ್ನು ವಿಸ್ತರಿಸುತ್ತವೆ, ಚಿತ್ರಕಲಾ ಶಕ್ತಿಯನ್ನು ಬೆಳೆಸಲು ಸಹಕಾರಿಯಾಗುತ್ತವೆ. ಸಾಹಿತ್ಯಕ್ಕೆ ಅನೇಕ ಮೂಲಗಳಿವೆ. ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರ ವೃತ್ತಿಪರತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಾಹಿತ್ಯಕ್ಕಾಗಿ ಸಮರ್ಪಣೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಶ್ಲಾಘಿಸಿದರು.

ಕರ್ನಾಟಕ ಜ್ಞಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ, ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುವುದು ಹೆಮ್ಮೆಯ ವಿಷಯ. ಪುಸ್ತಕಮನೆ ಪ್ರಕಾಶನದ ಮಾದರಿಯನ್ನು ರೂಪಿಸಿಕೊಳ್ಳುವುದು ಮುಖ್ಯ. ಇದು ವಿದ್ಯಾರ್ಥಿಕೇಂದ್ರಿತವಾಗಿ ನೈತಿಕ ಮೌಲ್ಯಗಳನ್ನು ಹೆಚ್ಚಿಸುವ ಪರಂಪರೆ ನಿರ್ಮಾಣಕ್ಕೆ ಸಹಾಯಕವಾಗಿದೆ ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಅಶ್ವಥ್ ಎಸ್. ಎಲ್. ಪ್ರಸ್ತಾವನೆಗೈದರು. ವಿ. ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಕಸಾಬ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಾಹಿತಿ ಪ್ರದೀಪ್ ಹೆಬ್ರಿ, ಸಂಸ್ಥೆಯ ಪ್ರಮುಖರಾದ ಗಣಪತಿ ಭಟ್, ಅಮೃತ್ ರೈ, ಗಣನಾಥ ಶೆಟ್ಟಿ, ಆದರ್ಶ್ ಎನ್.ಕೆ., ವಿಮಲ್ ರಾಜ್ ಉಪಸ್ಥಿತರಿದ್ದರು.

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *