ಕಾರ್ಕಳ: ಕಳೆದ ಒಂದು ತಿಂಗಳಿನಿಂದ ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಕಾರ್ಕಳದ ಜನತೆಗೆ ಮಳೆರಾಯ ಕೊನೆಗೂ ತಂಪೆರೆದಿದ್ದಾನೆ.
ಮಂಗಳವಾರ ಮಧ್ಯಾಹ್ನವೇ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಎಂಟ್ರಿ ಕೊಟ್ಟ ಮಳೆ ಅರ್ಧ ತಾಸು ಸುರಿದು ವಾತಾವರಣ ತಂಪಾಗಿಸಿದೆ.
ಕಾರ್ಕಳದ ಪೆರ್ವಾಜೆ ರಸ್ತೆಯ ಎಲ್ಐಸಿ ಕಚೇರಿ ಬಳಿ ಬಿರುಗಾಳಿಗೆ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ಸಂಚಾರಕ್ಕೆ ತೊಡಕಾಗಿದೆ. ಅಜೆಕಾರು, ಮುನಿಯಾಲು, ಬಜಗೋಳಿ ಪರಿಸರದಲ್ಲಿ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಯುಗಾದಿ ಹಬ್ಬಕ್ಕೆ ಮುನ್ನವೇ ವರುಣ ದೇವರ ಆಗಮನವಾಗಿದ್ದು,ರೈತರ ಹಾಗೂ ಜನರ ಮುಖದಲ್ಲಿ ಮಂದಹಾಸ ಮೂಡಿಸಿದೆ
K