
ಬೆಂಗಳೂರು,ಜ. 10: ರ್‍ಯಾಪಿಡೊ ಬೈಕ್ ಸವಾರನೋರ್ವ ಸಹಸವಾರೆ ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಗೆ ತೆರಳಲು ಯುವತಿ ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡಿದ್ದಳು. ಬೈಕ್ ನಲ್ಲಿ ಕುಳಿತು ಮುಂದೆ ಬ್ಯಾಗ್ ಇಟ್ಟಿದ್ದರು. ಈ ವೇಳೆ ಬೈಕ್ ನಲ್ಲಿಯೇ ಆರೋಪಿ ವಿವೇಕ್ ಹಿಂದೆ ಸರಿದಿದ್ದಾನೆ ಆಗ ಯುವತಿ ಯಾಕೆ ಹಿಂದೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿ ಬೈದಿದ್ದಾಳೆ.ಈ ವೇಳೆ ಯುವತಿಯ ಖಾಸಗಿ ಅಗಾಂಗ ಮುಟ್ಟಿ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಘಟನೆಯ ನಂತರ ಯುವತಿ ಕಿರುಚಾಡಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಘಟನೆ ಬೈಕ್ ಟ್ಯಾಕ್ಸಿ ಬಳಸುವ ಮಹಿಳೆಯರ ಸುರಕ್ಷತೆ ಕುರಿತು ಗಂಭೀರ ಚಿಂತನೆಗೆ ಕಾರಣವಾಗಿದೆ.

.
.
