ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆಸ್ತಿ ವಿವಾದಕ್ಕೆ ಸಂಬಧಿಸಿದAತೆ ಓಂ ಪ್ರಕಾಶ್ ಅವರ ಪತ್ನಿಯೇ ಕೊಲೆ ಮಾಡಿದ್ದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದ್ದು,ಈ ಪ್ರಕರಣಕ್ಕೆ ಸಂಬAಧಿಸಿದAತೆ ಓಂ ಪ್ರಕಾಶ್ ಪತ್ನಿ ಪಲ್ಲವಿಯನ್ನು ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಿವಾಸದಲ್ಲೇ ಓಂ ಪ್ರಕಾಶ್ ಭಾನುವಾರ ಮಧ್ಯಾಹ್ನ ಹತ್ಯೆಯಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಅವರ ಪುತ್ರ ದೂರು ನೀಡಿದ್ದರು. ಮೊದಲಿಗೆ ಯಾರನ್ನು ಬಂಧಿಸಿರಲಿಲ್ಲ. ಅವರ ಪತ್ನಿ, ಮಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ಇದೀಗ ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರನ್ನು ಬಂಧಿಸಿಲಾಗಿದೆ.
ಕೊಲೆಯ ರಹಸ್ಯ ಬಿಚ್ಚಿಟ್ಟ ಪಲ್ಲವಿ
ಪಲ್ಲವಿ ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೊದಲು ಓಂ ಪ್ರಕಾಶ್ ಮೇಲೆ ಖಾರದ ಪುಡಿ ಎರಚಿ, ಬಳಿಕ ಅಡುಗೆ ಎಣ್ಣೆಯನ್ನೂ ಸುರಿದಿದ್ದಾರೆ. ಕೈ ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದಾಗಿ ಪಲ್ಲವಿ ಮಾಹಿತಿ ನೀಡಿದ್ದಾರೆ. ಓಂ ಪ್ರಕಾಶ್‌ಗೆ 8-10 ಬಾರಿ ಇರಿಯಲಾಗಿದ್ದು, ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ 4-5 ಬಾರಿ ಇರಿದು ಹತ್ಯೆಗೈಯಲಾಗಿದೆ.
ಪತ್ನಿಯಿಂದ ಭೀಕರ ದಾಳಿಗೆ ಒಳಗಾದ ಓಂ ಪ್ರಕಾಶ್ ರಕ್ತ ಸಿಕ್ತರಾಗಿದ್ದರು. ಬರೋಬ್ಬರಿ 15 ರಿಂದ 20 ನಿಮಿಷಗಳ ಕಾಲ ರಕ್ತದ ಮಡುವಿನಲ್ಲೇ ಬಿದ್ದು ಒದ್ದಾಡಿದ್ದಾರೆ. ಆಘಾತಕಾರಿ ವಿಚಾರ ಏನಂದರೆ, ಗಂಡ ನೆಲಕ್ಕೆ ಬಿದ್ದು ನರಳಾಡೋದನ್ನು ಪತ್ನಿ ಪಲ್ಲವಿ ಸಮ್ಮನಿದ್ದು ನೋಡುತ್ತಿದ್ದರು ಎನ್ನಲಾಗಿದ್ದು ಇದು ಕ್ರೂರ ಮನಸ್ಥಿತಿಗೆ ಸಾಕ್ಷಿಯಾಗಿತ್ತು. ಓಂ ಪ್ರಕಾಶ್ ಕೊನೆ ಉಸಿರು ಬಿಡೋವರೆಗೂ ಕಾದು ಕೊನೆಗೆ ಪತಿ ಸತ್ತ ಬಳಿಕ ಐಪಿಎಸ್ ಅಧಿಕಾರಿಯೊಬ್ಬರ ಪತ್ನಿ ಹಾಗೂ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.